ಕನ್ನಡಿಗ ಮಯಾಂಕ್ ಅಗರ್ ವಾಲ್ ಆಟಕ್ಕೆ ಹರಿಣಗಳು ಹೈರಾಣಾಗಿದ್ದಾರೆ. ಎರಡು ದಿನಗಳ ಕಾಲ ನೆಲಕಚ್ಚಿ ಆಡಿದ ಮಯಾಂಕ್ ಅಗರ್ವಾಲ್ ಕನ್ನಡಿಗರೇ ಆದ ರಾಹುಲ್ ದ್ರಾವಿಡ್ ಅವರ ಬ್ಯಾಟಿಂಗ್ ವೈಭವವನ್ನು ನೆನಪಿಸಿದರು.
ವಿಶಾಖಪಟ್ಟಣದ ಡಾ. ವೈ.ಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಸದ್ಯ ಟೀಮ್ ಇಂಡಿಯಾ ಬ್ಯಾಟ್ಸ್ಮನ್ಗಳದ್ದೇ ದರ್ಬಾರು. ಅದರಲ್ಲೂ ಕನ್ನಡಿಗ ಮಯಾಂಕ್ ಅಗರ್ವಾಲ್ ಅವರು ಎರಡೂ ದಿನಗಳ ಕಾಲ ಹರಿಣಗಳ ಬೆವರಿಳಿಸಿದರು. ‘ವಾಲ್’ ಆಟಕ್ಕೆ ಸೌತ್ ಆಫ್ರಿಕಾ ಬೌಲರ್ಗಳು ಬೆವರಿ ಬೆಂಡಾದರು.
ಮೊದಲದಿನವಾದ ಬುಧವಾರ ರೋಹಿತ್ ಶರ್ಮಾ ಜೊತೆಯಾಗಿ ಇನ್ನಿಂಗ್ಸ್ ಆರಂಭಿಸಿದ್ದ ಅಗರ್ವಾಲ್ ಇಂದೂ ಕೂಡ ಹಿಟ್ ಮ್ಯಾನ್ ಜೊತೆ ಆಟ ಮುಂದುವರೆಸಿದರು. ನಿನ್ನೆ 84ರನ್ ಮಾಡಿದ್ದ ಅಗರ್ವಾಲ್ ಇಂದು ಸೆಂಚುರಿ ಪೂರೈಸಿದ್ದು ಮಾತ್ರವಲ್ಲದೆ ಆ ಸ್ಕೋರ್ ಅನ್ನು ಡಬಲ್ ಸೆಂಚುರಿಯಾಗಿ ಪರಿವರ್ತಿಸಿಕೊಂಡರು.
ರಾಹುಲ್ ದ್ರಾವಿಡ್ ಆಟವನ್ನು ನೆನಪು ಮಾಡಿಕೊಟ್ಟ ಅಗರ್ ವಾಲ್ ಚೊಚ್ಚಲ ಡಬಲ್ ಸೆಂಚುರಿ ಸಿಡಿಸಿ ಹೆಚ್ಚು ಹೊತ್ತು ನಿಲ್ಲಲಿಲ್ಲ. 215ರನ್ ಮಾಡಿದ್ದ ಅವರು ಎಲ್ಗರ್ ಬೌಲಿಂಗ್ನಲ್ಲಿ ಡಿ.ಪೀಡ್ಟ್ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದ್ರು. ‘ವಾಲ್’ ಆಟದಲ್ಲಿ 23 ಫೋರ್ ಹಾಗೂ 6 ಸಿಕ್ಸರ್ ಗಳಿದ್ದವು.
ಇನ್ನು ಮೊದಲ ಬಾರಿಗೆ ಟೆಸ್ಟ್ನಲ್ಲಿ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (176) ಕೂಡ ಅದ್ಭುತ ಆಟವಾಡಿ ತಾನು ಟಿ20, ಒಡಿಐಗೆ ಮಾತ್ರವಲ್ಲ ಟೆಸ್ಟ್ಗೂ ಬೇಕಿದ್ದೇನೆ ಅಂತ ಪ್ರೂವ್ ಮಾಡಿದ್ದಾರೆ.
ಮಹಾಗೋಡೆ ವೈಭವ ನೆನಪಿಸಿದ ‘ವಾಲ್’ ಔಟ್..!
TRENDING ARTICLES