Wednesday, January 15, 2025

ಕನ್ನಡಿಗ ಮಯಾಂಕ್ ಅಗರ್​​​ವಾಲ್​ ಚೊಚ್ಚಲ ದ್ವಿಶತಕ – ಹೇಗಿದೆ ಗೊತ್ತಾ ‘ವಾಲ್​’ ಮನಮೋಹಕ ಆಟ?

ಟೀಮ್ ಇಂಡಿಯಾದ ಯುವ ಕ್ರಿಕೆಟಿಗ, ಕನ್ನಡಿಗ ಮಯಾಂಕ್ ಅಗರ್​ವಾಲ್​ ಚೊಚ್ಚಲ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಗೋಡೆಯಂತೆ ಗಟ್ಟಿಯಾಗಿ ನಿಂತು ಆಡುತ್ತಿರುವ ಮಯಾಂಕ್​ ಚೊಚ್ಚಲ ಶತಕವನ್ನು ಚೊಚ್ಚಲ ಟೆಸ್ಟ್​ ದ್ವಿಶತಕವನ್ನಾಗಿ ಪರಿವರ್ತಿಸಿದ್ದಾರೆ..!
ಡಾ. ವೈ.ಎಸ್​ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಮ್ಯಾಚ್​ನ ಎರಡನೇ ದಿನವಾದ ಇಂದು 84ರನ್​​ ನಿಂದ ಆಟ ಮುಂದುವರೆಸಿದ್ದ ಅಗರ್​ವಾಲ್​ ಆರಂಭದಲ್ಲಿ ಸೆಂಚುರಿ ಪೂರೈಸಿದ್ದರು. ಬಳಿಕವೂ ತಾಳ್ಮೆ ಕಳೆದುಕೊಳ್ಳದೆ ಆಟ ಮುಂದುವರೆಸಿದ ಅವರು ದ್ವಿಶತಕ ಸಿಡಿಸಿದ್ದಾರೆ.
362 ಬಾಲ್​ಗಳಲ್ಲಿ 22 ಫೋರ್​ ಮತ್ತು 6 ಸಿಕ್ಸರ್​ಗಳೊಂದಿಗೆ 208ರನ್​ ಮಾಡಿರುವ ಅಗರ್​ವಾಲ್​​ ಜೊತೆಗೆ ಅಜಿಂಕ್ಯ ರಹಾನೆ (10) ಬ್ಯಾಟಿಂಗ್ ಮುಂದುವರೆಸಿದ್ದಾರೆ.

RELATED ARTICLES

Related Articles

TRENDING ARTICLES