Thursday, December 26, 2024

ಕ್ರಿಕೆಟ್​ಗ ಪೃಥ್ವಿ ಶಾಗೆ ಬ್ಯಾಡ್ಮಿಂಟನ್​ ತಾರೆ ಪಿ.ವಿ ಸಿಂಧು ಗುರು..!

ಯುವ ಕ್ರಿಕೆಟಿಗ ಪೃಥ್ವಿ ಶಾಗೆ ಭಾರತದ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಗುರು..! ಅರೆ, ಏನಪ್ಪಾ ಇದು? ಪೃಥ್ವಿ ಟೀಮ್ ಇಂಡಿಯಾದ ಯಂಗ್​ ಬ್ಯಾಟ್ಸ್​​ಮನ್. ಪಿ.ವಿ ಸಿಂಧು ಬ್ಯಾಡ್ಮಿಂಟನ್ ಆಟಗಾರ್ತಿ…! ಪೃಥ್ವಿ ಶಾಗೆ ಪಿ.ವಿ ಸಿಂಧು ಹೇಗೆ ಗುರುವಾದ್ರು? ಪೃಥ್ವಿ ಕ್ರಿಕೆಟ್ ಬಿಟ್ಟು ಬ್ಯಾಡ್ಮಿಂಟನ್ ಕಡೆ ಗಮನ ಹರಿಸಿದ್ರಾ ಅಂತ ಆಶ್ಚರ್ಯವಾಗ್ತಿದೆಯಾ? ಇಲ್ಲ.. ಪೃಥ್ವಿ ಕ್ರಿಕೆಟ್​ಗಾಗಿಯೇ ಸಿಂಧು ಅವರಿಂದ ಪಾಠ ಹೇಳಿಸಿಕೊಳ್ತಿದ್ದಾರೆ..!
ಸದ್ಯ 8 ತಿಂಗಳ ಕಾಲ ಬ್ಯಾನ್​ಗೆ ಗುರಿಯಾಗಿರುವ ಪೃಥ್ವಿ ಶಾ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಹಾಗೂ ಫಿಜಿಕಲ್ ಫಿಟ್ನೆಸ್​ ಇಂಪ್ರೂವ್​ ಮಾಡಿಕೊಳ್ಳಲು ಪಿ.ವಿ ಸಿಂಧು ಅವರಿಂದ ಟ್ರೈನಿಂಗ್ ಪಡೆಯಲಿದ್ದಾರೆ. ಫುಟ್​​ವರ್ಕ್​ ಬಗ್ಗೆ ಪೃಥ್ವಿ ಪಾಠ ಕಲೀತಿದ್ದು, ಬ್ಯಾಟಿಂಗ್ ವೇಳೆ ಫುಟ್​ವರ್ಕ್​ ಸಣ್ಣಪುಟ್ಟ ಬದಲಾವಣೆ ಮಾಡಿಕೊಳ್ಳೋಕೆ ಶಾ ವರ್ಕ್ಔಟ್ ಮಾಡ್ತಿದ್ದಾರೆ. ಫೀಲ್ಡಿಂಗ್ ವೇಳೆ ಹೇಗೆ ಚುರುಕಾಗಿರ್ಬೇಕು ಅನ್ನೋದನ್ನು ಕೂಡ ಪೃಥ್ವಿ ಸಿಂಧೂ ಅವರಿಂದ ಹೇಳಿಸಿಕೊಳ್ತಿದ್ದಾರೆ.

RELATED ARTICLES

Related Articles

TRENDING ARTICLES