Monday, January 27, 2025

ಬಾಡಿ ಬಿಲ್ಡಿಂಗ್​​ನಲ್ಲಿ ಚಾಂಪಿಯನ್​ ಆದ ಬೆಂಗಳೂರು ಮಹಿಳೆ..!

ಸಾಮಾನ್ಯವಾಗಿ ಪುರುಷರಿಗೆ ಹೋಲಿಸಿದ್ರೆ ಮಹಿಳೆಯರು ಫಿಟ್ನಸ್​ ಮಟ್ಟ ಸ್ವಲ್ಪ ಕಮ್ಮಿಯೇ. ಮದ್ವೆಯಾದ್ಮೇಲಂತೂ ಅವರು ತಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳೋದು ಬಹಳ ಅಪರೂಪ. ಅದರಲ್ಲೂ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಛಾಪು ಮೂಡಿಸುವುದು ಅಷ್ಟು ಸುಲಭವೂ ಅಲ್ಲ. ಆದರೆ, ನಮ್ಮ ಬೆಂಗಳೂರಿನ ಮಹಿಳೆಯೊಬ್ಬರು ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

ಹೌದು, ಅವರು ಜೋತ್ಸ್ನಾ ವೆಂಕಟೇಶ್. ವಯಸ್ಸು 41. 16 ವರ್ಷದ ಮಗಳು ಕೂಡ ಇದ್ದಾಳೆ. ಅವರೀಗ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಮಿಂಚಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಕೋರಮಂಗಲದಲ್ಲಿ ಇತ್ತೀಚೆಗೆ ನಡೆದ ಇಂಡಿಯನ್ ಬಾಡಿ ಬಿಲ್ಡಿಂಗ್ ಮತ್ತು ಫಿಟ್ನೆಸ್​ ಚಾಂಪಿಯನ್ ಶಿಪ್​ನಲ್ಲಿ ಫಿಗರ್​ ಹಾಗೂ ಫಿಟ್ನೆಸ್​ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

ಮಹಿಳೆಯರು ಸಾಮಾನ್ಯವಾಗಿ ಬಾಡಿ ಬಿಲ್ಡಿಂಗ್ ವೃತ್ತಿಯಾಗಿ ತೆಗೆದುಕೊಳ್ಳೋಕೆ ಹಿಂಜರಿಯುತ್ತಾರೆ. ಅಂತವರಿಗೆ ಪ್ರೇರಣೆ ಆಗಲಿ ಅಂತ ಜಿವಿ ಫಿಟ್ನೆಸ್​ ಮತ್ತು ಗ್ರೂಮಿಂಗ್ ಎಕ್ಸ್​​ಪರ್ಟ್ಸ್​ ಆರಂಭಿಸಿದ್ದಾರೆ. ತಾವು ನಿತ್ಯ ಬೆಳಗ್ಗೆ 5 ಗಂಟೆಗೆ ಎದ್ದು, ವರ್ಕ್​ಔಟ್ ಮಾಡ್ತಾರೆ. ಇಷ್ಟದ ಆಹಾರವನ್ನೆಲ್ಲಾ ಬದಿಗೊತ್ತಿ ಫಿಟ್ನೆಸ್​ ಕಡೆ ಮಾತ್ರ ಗಮನ ಕೊಡ್ತಾರೆ. ಹೀಗಾಗಿ 41ರ ಹರೆಯದಲ್ಲೂ ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.

RELATED ARTICLES

Related Articles

TRENDING ARTICLES