ರಿಷಭ್ ಪಂತ್…ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್, ಬ್ಯಾಟ್ಸ್ಮನ್. ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ನಲ್ಲಿ ಸರಣಿ ಮಧ್ಯೆದಲ್ಲಿ ತಂಡವನ್ನು ಕೂಡಿ ಕೊಂಡಿದ್ದ ಪಂತ್ ನಿರೀಕ್ಷಿತ ಆಟವನ್ನು ಆಡುವಲ್ಲಿ ವಿಫಲರಾಗಿದ್ದರು. ಆದರೂ ಯುವ ಆಟಗಾರರನ್ನು ಕೇವಲ ಒಂದು ಸರಣಿಯ ಪ್ರದರ್ಶನದಿಂದ ಅಳೆದು-ತೂಗುವುದು ಬೇಡ ಅನ್ನೋ ಕಾರಣಕ್ಕೆ ಹಾಗೂ ಪಂತ್ ಟ್ಯಾಲೆಂಟ್ ಮೇಲಿನ ಭರವಸೆಯಿಂದ ವರ್ಲ್ಡ್ಕಪ್ ನಂತರ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿತ್ತು. ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನಕ್ಕೆ ಪಂತೇ ಸೂಕ್ತ ಎನ್ನುವುದು ಬಿಸಿಸಿಐ ಮಾತ್ರವಲ್ಲದೆ ಕ್ರಿಕೆಟ್ ಪಂಡಿತರ ಭವಿಷ್ಯ ಕೂಡ.
ವಿಶ್ವಕಪ್ನಲ್ಲಿ ಎಡವಿದ್ದ ಪಂತ್ ವಿಂಡೀಸ್ ಟೂರ್ನಲ್ಲೂ ಫಾರ್ಮ್ಗೆ ಮರಳಲಿಲ್ಲ. ಆದರೂ ಇನ್ನೊಂದು ಅವಕಾಶ ಎಂಬಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಮತ್ತೆ ಧೋನಿ ಅನುಪಸ್ಥಿತಿಯಲ್ಲಿ ಪಂತ್ ಅವರನ್ನೇ ಆಯ್ಕೆ ಮಾಡಲಾಗಿತ್ತು. ಟಿ20ಯಲ್ಲಿ ಎಡವಿರುವ ಪಂತ್ ಟೆಸ್ಟ್ನಲ್ಲಾದರೂ ತಮ್ಮ ಅಸಲಿ ಆಟ ಆಡಿ ಮಿಂಚುತ್ತಾರಾ ಕಾದು ನೋಡಬೇಕಿದೆ.
ಈ ನಡುವೆ ಪಂತ್ಗೆ ಎಚ್ಚರಿಕೆ ನೀಡಿದ್ದವರೇ ಅವರ ಬೆನ್ನಿಗೆ ನಿಂತಿದ್ದಾರೆ..! ಪಂತ್ ಬದಲಿಗೆ ಬೇರೆ ಆಟಗಾರರನ್ನು ಆಯ್ಕೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯ ಬಂದಾಗ ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ, ಕೆಟ್ಟ ಹೊಡೆತಕ್ಕೆ ಯತ್ನಿಸಿ ಪರಿಣಾಮ ಎದುರಿಸಬೇಕಾಗುತ್ತದೆ ಅಂತ ಪಂತ್ಗೆ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದ್ದರು. ಈಗ ಅದೇ ಶಾಸ್ತ್ರಿ ಯುವ ಕ್ರಿಕೆಟಿಗನ ಬೆನ್ನಿಗೆ ನಿಂತಿದ್ದಾರೆ.
ರಿಷಭ್ ಪಂತ್ಗೆ ಫಾರ್ಮ್ಗೆ ಬರಲು ಅವಶ್ಯಕತೆ ಇರೋ ಅಷ್ಟು ಕಾಲಾವಕಾಶವನ್ನು ನೀಡಲಾಗುತ್ತೆ. ಪಂತ್ ಅನ್ನೋ ವ್ಯಕ್ತಿಯೇ ಬೇರೆ. ಆತ ಭಯಂಕರ ಗೆಲುವಿನ ರೂವಾರಿ ಆಗಲಿದ್ದಾರೆ. ಅವರಂಥಾ ಆಟಗಾರ ಸಿಗುವುದು ಕಮ್ಮಿ. ಹಾಗಾಗಿ ಅವರ ಬಗ್ಗೆ ಅಗಾಧ ತಾಳ್ಮೆ ಹೊಂದಿದ್ದೇವೆ ಅಂತ ಶಾಸ್ತ್ರಿ ಹೇಳಿದ್ದಾರೆ.
ರಿಷಭ್ ವರ್ಲ್ಡ್ಕ್ಲಾಸ್ ಆಟಗಾರ. ಆತ ದೊಡ್ಡ ಘಾತುಕ ಆಟಗಾರ ಆಗ್ತಾನೆ ಅಂತ ಭವಿಷ್ಯ ನುಡಿದಿದ್ದಾರೆ. ಅಷ್ಟೇ ಅಲ್ಲದೆ ತಾವು ಈ ಹಿಂದೆ ಪಂತ್ ಬಗ್ಗೆ ಆಡಿದ ಮಾತುಗಳ ಬಗ್ಗೆ ಸ್ಪಷ್ಟನೆ ನೀಡಿದ ಶಾಸ್ತ್ರಿ, ಮೂರ್ಖತನದ ವರ್ತನೆ ತೋರಿದಾಗ ನಾನು ಎಚ್ಚರಿಸಲೇ ಬೇಕು ಎಂದಿದ್ದಾರೆ.
ರಿಷಭ್ಗೆ ಎಚ್ಚರಿಕೆ ನೀಡಿದವರೇ ಬೆನ್ನಿಗೆ ನಿಂತಿದ್ದಾರೆ..!
TRENDING ARTICLES