Wednesday, January 15, 2025

ವರ್ಲ್ಡ್​ಕಪ್​ ಬಳಿಕ ಇನ್ನೂ ಏಕೆ ಧೋನಿ ಬ್ಯಾಟ್​ ಹಿಡಿದಿಲ್ಲ? ಇಲ್ಲಿದೆ ಅಸಲಿ ಕಾರಣ..!

ಇಂಗ್ಲೆಂಡ್​​​ನಲ್ಲಿ ನಡೆದ ವರ್ಲ್ಡ್​​ಕಪ್​ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್​ ಮಹೇಂದ್ರ ಸಿಂಗ್ ಧೋನಿ ತಂಡದ ಪರ ಬ್ಯಾಟ್​ ಹಿಡಿದಿಲ್ಲ..! ವರ್ಲ್ಡ್​​ಕಪ್​ ಮುಗಿದ ಮೇಲೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಹೋಗಿದ್ರಿಂದ ಧೋನಿ ವೆಸ್ಟ್​ ಇಂಡೀಸ್ ಪ್ರವಾಸದಿಂದ ದೂರ ಉಳಿದಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆ ಆಗ್ತಾರೆ ಅನ್ನೋ ನಿರೀಕ್ಷೆ ಇತ್ತು. ಆದರೆ, ಸೌತ್​​ಆಫ್ರಿಕಾ ಸರಣಿಗೂ ಆಯ್ಕೆ ಆಗಿರಲಿಲ್ಲ. ಧೋನಿ ವಿಶ್ರಾಂತಿ ಬಯಸಿದ್ದರಿಂದ ಅವರು ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಎದುರಿನ ಸರಣಿಯಿಂದ ದೂರ ಉಳಿದಿದ್ರು ಎನ್ನಲಾಗಿತ್ತು. ಆದರೆ ಧೋನಿ ವಿಶ್ರಾಂತಿ ಬಯಸಿ ತಂಡದಿಂದ ದೂರ ಉಳಿದಿಲ್ಲ..! ಬದಲಿಗೆ ಅವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೌದು, ಧೋನಿ ಮಣಿಕಟ್ಟು ಗಾಯದಿಂದ ಬಳಲುತ್ತಿದ್ದು, ಹೀಗಾಗಿ ರೆಸ್ಟ್​ನಲ್ಲಿದ್ದಾರೆ. ಆದ್ದರಿಂದ ಬಹುಶಃ ಬಾಂಗ್ಲಾ ವಿರುದ್ಧದ ಸರಣಿಗೂ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದ್ದು, ನವೆಂಬರ್ ಅಂತ್ಯದಲ್ಲಿ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಅಂತ ಬಿಸಿಸಿಐ ಮೂಲಗಳು ಹೇಳಿವೆ.

RELATED ARTICLES

Related Articles

TRENDING ARTICLES