ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ವೈಸ್ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಹೊಸ ಜವಬ್ದಾರಿ ನೀಡಿದ್ದಾರೆ. ಎಲ್ರಿಗೂ ಗೊತ್ತೇ ಇದೆ… ರೋಹಿತ್ ಶರ್ಮಾ ಆನ್ ಸ್ಪಾರ್ಟ್ನಲ್ಲಿ ಡಿಸಿಷನ್ ತಗೋಳದ್ರಲ್ಲಿ ಎತ್ತಿದ ಕೈ. ರೋಹಿತ್ ಎಂಥಾ ನಾಯಕ ಅನ್ನೋದು ಈಗಾಗಲೇ ಜಗಜ್ಜಾಹಿರವಾಗಿದೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನೆಡಿಸಿ ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿರುವುದೇ ಇದಕ್ಕೆ ಸಾಕ್ಷಿ.
ರೋಹಿತ್ ಲೀಡರ್ ಶಿಪ್ ಬಗ್ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಮತ್ತು ಕ್ಯಾಪ್ಟನ್ ಕೊಹ್ಲಿಗೂ ಗೊತ್ತು. ಹೀಗಾಗಿ ಅವರಿಗೆ ಹೊಸ ಹೊಣೆ ನೀಡಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ಯುವಕರಿಗೆ ಮಾರ್ಗದರ್ಶನ ನೀಡಲು ರೋಹಿತ್ ಶರ್ಮಾಗೆ ತಿಳಿಸಲಾಗಿದೆ. ರೋಹಿತ್ ಶರ್ಮಾ ಲೀಡರ್ಶಿಪ್ ಗ್ರೂಪ್ನಲ್ಲಿರೋದು ನಿಜ. ಆದ್ರೆ, ಇದೇ ಮೊದಲ ಬಾರಿಗೆ ಅವರು ತನ್ನ ಐಡಿಯಾಗಳನ್ನು ಆಟಗಾರರ ಬಳಿ ಹೇಳಿಕೊಳ್ತಿಲ್ಲ. ತಂಡದ ಕ್ಯಾಪ್ಟನ್ ಕೊಹ್ಲಿ ಮತ್ತು ಕೋಚ್ಗೆ ರೋಹಿತ್ ಶರ್ಮಾ ಲೀಡರ್ ಶಿಪ್ ಬಗ್ಗೆ ನಂಬಿಕೆ ಇದೆ. ಆದ್ದರಿಂದ ಬೌಲರ್ಗಳ ಬಳಿ ಹೋಗಿ ಎದುರಾಳಿ ವಿಕೆಟ್ ಪಡೆಯೋದು ಹೇಗೆ ಅಂತ ಸೂಚಿಸುವುದು ಒಳ್ಳೆಯ ಬೆಳವಣಿಗೆ ಎಂದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಹೇಳಿದೆ. ಹೀಗೆ ಕೊಹ್ಲಿ, ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಯುವಕರಿಗೆ ಮಾರ್ಗದರ್ಶನ ನೀಡುವ ಹೊಣೆಯನ್ನು ವಹಿಸಿದೆ.
ರೋಹಿತ್ ಶರ್ಮಾಗೆ ಕ್ಯಾಪ್ಟನ್ ಕೊಹ್ಲಿಯಿಂದ ಹೊಸ ಹೊಣೆ..!
TRENDING ARTICLES