Wednesday, January 15, 2025

ಟಿ20ಯಲ್ಲೂ ಕೊಹ್ಲಿ, ರೋಹಿತ್​​ರದ್ದೇ ದರ್ಬಾರು…ಇಬ್ಬರಲ್ಲಿ ಯಾರು ನಂಬರ್ 1..?

ಭಾರತ ವಿಶ್ವ ಕ್ರಿಕೆಟ್​ಗೆ ಅದೆಷ್ಟೋ ಮಂದಿ ದಿಗ್ಗಜರನ್ನು ಕೊಡುಗೆಯಾಗಿ ನೀಡಿದೆ. ಟೀಮ್ ಇಂಡಿಯಾದ ಆಟಗಾರರು ವಿಶ್ವಮಟ್ಟದಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ವಿಶ್ವಕ್ರಿಕೆಟನ್ನು ಭಾರತೀಯರು ಆಳಿದ್ದಾರೆ…ಆಳುತ್ತಿದ್ದಾರೆ. ಪ್ರಸ್ತುತದಲ್ಲೂ ವಿಶ್ವಕ್ರಿಕೆಟ್​ನಲ್ಲಿ ಭಾರತದ ಆಟಗಾರರದ್ದೇ ಹವಾ..!
ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಪೈಪೋಟಿಗೆ ಬಿದ್ದವರಂತೆ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಒಡಿಐ ಮಾತ್ರವಲ್ಲ ಟಿ20 ಫಾರ್ಮೆಟ್​ನಲ್ಲೂ ಕ್ಯಾಪ್ಟನ್​ ಕೊಹ್ಲಿಗೆ ಹಿಟ್​ಮ್ಯಾನ್ ಶರ್ಮಾ ಸವಾಲು…! ಈ ಇಬ್ಬರು ಸ್ಟಾರ್ ಆಟಗಾರರ ನಡುವೆ ಆರೋಗ್ಯಕರ ಪೈಪೋಟಿ ಇದ್ದು, ಮೊದಲ ಎರಡು ಸ್ಥಾನಗಳಲ್ಲಿ ನಮ್ಮ ನಾಯಕ, ಉಪನಾಯಕರದ್ದೇ ರಾಜ್ಯಭಾರ ಅನ್ನೋದು ಗುಡ್​ ನ್ಯೂಸ್.
ನಿನ್ನೆ ಮೊಹಾಲಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟಿ20 ಮ್ಯಾಚ್​ನಲ್ಲಿ ಕ್ಯಾಪ್ಟನ್ ಕೊಹ್ಲಿ 52 ಬಾಲ್​ಗಳಲ್ಲಿ 72ರನ್​ ಗಳಿಸಿ ಭಾರತದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕೊಹ್ಲಿ ಈ ರನ್​ಗಳಿಕೆಯೊಂದಿಗೆ ಟಿ20ಯಲ್ಲಿ 2441ರನ್​ ಗಳಿಸಿದಂತಾಗಿದೆ. ಸದ್ಯ ವಿಶ್ವ ಟಿ20ಯಲ್ಲಿ ಅತೀ ಹೆಚ್ಚು ರನ್​ ಸಂಪಾದಿಸಿರುವ ಆಟಗಾರರವ ಪಟ್ಟಿಯಲ್ಲಿ ಕೊಹ್ಲಿ ನಂಬರ್ 1 ಸ್ಥಾನಕ್ಕೆ ಜಿಗಿದಿದ್ದಾರೆ. 2434ರನ್​ ಬಾರಿಸಿರುವ ರೋಹಿತ್ ಶರ್ಮಾ ಸೆಕೆಂಡ್​ ಪ್ಲೇಸ್​ನಲ್ಲಿದ್ದಾರೆ. ಮುಂದಿನ ಪಂದ್ಯದಲ್ಲಿ ಕೊಹ್ಲಿಗಿಂತ ಏಳೇ ಏಳು ರನ್ ಜಾಸ್ತಿ ಮಾಡಿದ್ರೂ ಶರ್ಮಾ ಮತ್ತೆ ನಂಬರ್ 1 ಪಟ್ಟಕ್ಕೆ ವಾಪಸ್ ಆಗಲಿದ್ದಾರೆ.
ಇನ್ನು 2283ರನ್ ಗಳಿಸಿರುವ ನ್ಯೂಜಿಲೆಂಡ್​ನ ಗುಪ್ಟಿಲ್ 3, 2263ರನ್ ಮಾಡಿರುವ ಪಾಕ್​ನ ಶೋಯಭ್ ಮಲ್ಲಿಕ್ 4ನೇ ಸ್ಥಾನದಲ್ಲಿದ್ದಾರೆ.

RELATED ARTICLES

Related Articles

TRENDING ARTICLES