Wednesday, January 15, 2025

12 ವರ್ಷಗಳ ಹಿಂದಿನ ಈ ದಿನ ಯುವರಾಜ್​​ ಸಿಡಿದೆದ್ದಿದ್ರು…ಅವತ್ತು ಏನಾಗಿತ್ತು?

ನೆನಪಿರಬಹುದು.. ಇವತ್ತಿಗೆ ಸರಿಯಾಗಿ 12 ವರ್ಷಗಳ ಹಿಂದೆ…ಯುವರಾಜ್​ ಸಿಂಗ್ ಸಿಡಿದೆದ್ದಿದ್ರು…ಯುವಿ ಆರ್ಭಟಕ್ಕೆ ಇಂಗ್ಲೆಂಡ್​​ ಆಟಗಾರರು  ಗಢಗಢ ನಡುಗಿದ್ರು. ಅದರಲ್ಲೂ ವೇಗಿ ಸ್ಟುವರ್ಟ್ ಬ್ರಾಡ್​ಗಂತೂ ಆ ದಿನ ನರಕ ದರ್ಶನ..! ಯುವಿಯ ಅಂದಿನ ಆಟವನ್ನು ನೆನೆದರೆ ಬಹುಶಃ ಬ್ರಾಡ್​ ಇವತ್ತೂ ಕೂಡ ನಿದ್ರೆ ಮಾಡ್ಲಿಕ್ಕಿಲ್ಲ..!
ಹೌದು…ಅದು ಸೆಪ್ಟೆಂಬರ್​ 19, 2007.. ಭಾರತೀಯ ಕ್ರಿಕೆಟ್ ಅಭಿಮಾನಿಗಳೂ ಎಂದೂ ಮರೆಯದ ಸುದಿನ..! ಚೊಚ್ಚಲ ಟಿ20 ವರ್ಲ್ಡ್​​ಕಪ್​​ನಲ್ಲಿ ಟೀಮ್ ಇಂಡಿಯಾ ಆಲ್​ರೌಂಡರ್​ ಯುವರಾಜ್​ ಸಿಂಗ್ ವರ್ಲ್ಡ್​ ರೆಕಾರ್ಡ್​ ಮಾಡಿದ ದಿನವಿದು. ಡರ್ಬನ್​ನಲ್ಲಿ ನಡೆದ ಸೆಮಿಫೈನಲ್​ ಮ್ಯಾಚ್​ನಲ್ಲಿ ಯುವರಾಜ್​ ಸಿಂಗ್ ಸತತ 6 ಬಾಲ್​ಗಳಲ್ಲಿ 6 ಸಿಕ್ಸರ್ ಸಿಡಿಸಿದ್ದು ಇದೇ ದಿನ..! ಆ ವಿಶ್ವ ದಾಖಲೆ ನಿರ್ಮಾಣವಾಗಿ ಇಂದಿಗೆ 12 ವರ್ಷ..!
ಅಂದು ಇಂಗ್ಲೆಂಡ್​ನ ಆಲ್​ರೌಂಡರ್ ಆ್ಯಂಡ್ರ್ಯೂ ಫ್ಲಿಂಟಾಫ್​ ಯುವರಾಜ್​ ಸಿಂಗ್​​ರನ್ನು ಕೆಣಕಿದ್ದರು. ಅವತ್ತು ಫ್ಲಿಂಟಾಫ್ ಮಾಡಿದ ಅದೊಂದು ತಪ್ಪು ಯುವಿ ವಿಶ್ವ ದಾಖಲೆ ಮಾಡಲು ಕಾರಣವಾಯ್ತು..! ಫ್ಲಿಂಟಾಫ್​ ಯುವಿಯನ್ನು ಕೆಣಕಿದ ಬಳಿಕ ಬಲಿಪಶುವಾಗಿದ್ದು ವೇಗಿ ಸ್ಟುವರ್ಟ್ ಬ್ರಾಡ್.
19 ಓವರ್​ನಲ್ಲಿ ಬೌಲಿಂಗ್​ಗಿಳಿದ ಸ್ಟುವರ್ಟ್​ ಬ್ರಾಡ್ ಎಸೆದ ಎಲ್ಲಾ ಆರು ಎಸೆತಗಳನ್ನು ಯುವಿ ಸಿಕ್ಸರ್ ಸಿಡಿಸಿದ್ದರು. ಅದನ್ನು ಕ್ರಿಕೆಟ್​ ಜಗತ್ತು ಎಂದೂ ಮರೆಲಾಗದು.

RELATED ARTICLES

Related Articles

TRENDING ARTICLES