Friday, November 22, 2024

ಚೊಚ್ಚಲ ಟಿ20 ಮ್ಯಾಚ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ್ದ ಭಾರತದ ಕ್ರಿಕೆಟಿಗ ನಿವೃತ್ತಿ..!

2001- 2007ರ ಅವಧಿಯಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ಆಲ್​ರೌಂಡರ್ ದಿನೇಶ್ ಮೋಂಗಿಯಾ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. 2007ರ ಮೇ 12ರಂದು ಬಾಂಗ್ಲಾ ದೇಶದ ವಿರುದ್ಧ ಕೊನೆಯ ಒಡಿಐ ಆಡಿದ್ದ ಮೋಂಗಿಯಾ ಆ ನಂತರ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರ್ಲಿಲ್ಲ. ಕೊನೆಯ ಮ್ಯಾಚ್ ಆಡಿದ 12 ವರ್ಷದ ಬಳಿಕ ಇಂದು ಅವರು ನಿವೃತ್ತಿ ಘೋಷಿಸಿದ್ದಾರೆ.
1995ರಲ್ಲಿ ಅಂಡರ್ 19 ತಂಡದಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದ ಅವರು, ಸತತ 6 ವರ್ಷಗಳ ಕಾಲ ದೇಶೀಯ ಟೂರ್ನಿಯಲ್ಲಿ ಅದ್ಭುತ ಸ್ಥಿರ ಪ್ರದರ್ಶನ ನೀಡಿ 2001ರಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. 2001ರ ಮಾರ್ಚ್​ 28ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮುಖೇನ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಎಂಟ್ರಿ ಕೊಟ್ಟಿದ್ದರು. 2003ರ ವಿಶ್ವಕಪ್​ ತಂಡದ ಸದಸ್ಯರೂ ಆಗಿದ್ದರು. 
ಟೀಮ್ ಇಂಡಿಯಾ ಪರ ಒಟ್ಟು 57 ಒಡಿಐಗಳನ್ನು ಆಡಿರುವ ಮೋಂಗಿಯಾ 1 ಸೆಂಚುರಿ, 4 ಹಾಫ್​ ಸೆಂಚರಿ ಸಹಿತ 1230ರನ್​ಗಳಿಸಿದ್ದರು. 2002ರಲ್ಲಿ ಜಿಂಬಾಬ್ವೆ ವಿರುದ್ಧ ಇವರು ಸಿಡಿಸಿದ್ದ ಅಜೇಯ 159ರನ್​ ಸ್ಮರಣೀಯ ಇನ್ನಿಂಗ್ಸ್.
ಚೊಚ್ಚಲ ಟಿ20ಯಲ್ಲಿ ಅತೀ ಹೆಚ್ಚು ರನ್ :
2006ರಲ್ಲಿ ಸೌತ್​ಆಫ್ರಿಕಾ ವಿರುದ್ಧ ಭಾರತ ಆಡಿದ್ದ ಚೊಚ್ಚಲ ಟಿ20ಐನಲ್ಲಿ ಮೋಂಗಿಯಾ ಸ್ಥಾನ ಪಡೆದಿದ್ದರು. ಅದು ಅವರು ಆಡಿದ ಮೊದಲ ಹಾಗೂ ಕೊನೆಯ ಟಿ20ಐ ಕೂಡ. ಆ​ ಪಂದ್ಯದಲ್ಲಿ ಮೋಂಗಿಯಾ 38ರನ್ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತ ಗೆದ್ದಿತ್ತು. 14 ವಿಕೆಟ್​​ ಕೂಡ ಕಿತ್ತಿದ್ದರು. 

ದಕ್ಷಿಣ ಆಫ್ರಿಕಾದ ಜೊಹಾನ್ಸ್ ಬರ್ಗ್​ನಲ್ಲಿ ನಡೆದ ಮ್ಯಾಚ್​ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಸೌತ್​ ಆಫ್ರಿಕಾ 20 ಓವರ್​ಗಳಲ್ಲಿ 9 ವಿಕೆಟ್​ಗೆ 126ರನ್ ಮಾಡಿತ್ತು. ಗುರಿ ಬೆನ್ನತ್ತಿದ ಭಾರತ 19.5 ಓವರ್​ಗಳಲ್ಲಿ 4 ವಿಕೆಟ್​ಗೆ 127ರನ್ ಮಾಡುವ ಮೂಲಕ 6 ವಿಕೆಟ್​ಗಳ ಜಯ ದಾಖಲಿಸಿತ್ತು. ಭಾರತದ ಪರ ಕ್ಯಾಪ್ಟನ್ ವೀರೇಂದ್ರ ಸೇಹ್ವಾಗ್ 34, ಸಚಿನ್ ತೆಂಡೂಲ್ಕರ್ 10ರನ್ ಮಾಡಿದ್ದರು. ಧೋನಿ ಸಂಪಾದನೆ ಶೂನ್ಯ..! ದಿನೇಶ್ ಕಾರ್ತಿಕ್ ಅಜೇಯ 31 ರನ್ ಹಾಗೂ ಸುರೇಶ್ ರೈನಾ ಅಜೇಯ 3ರನ್ ಗಳಿಸಿದ್ದರು.

ದಿನೇಶ್ ಮೋಂಗಿಯಾ 45 ಬಾಲ್​ಗಳಲ್ಲಿ 38ರನ್ ಮಾಡಿದ್ದರು. ಇದು ಭಾರತದ ಪರ ಮಾತ್ರವಲ್ಲದೆ ಇಡೀ ಪಂದ್ಯದಲ್ಲಿ ಎರಡೂ ತಂಡದ ಬ್ಯಾಟ್ಸ್​ಮನ್​ಗಳ ಸ್ಕೋರ್​ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿತ್ತು. ದ.ಆಫ್ರಿಕಾ ಪರ ಮಾರ್ಕೆಲ್ ಗಳಿಸಿದ್ದ 27ರನ್ ಹೈಯಸ್ಟ್​​​ ಇಂಡಿವ್ಯೂಸಲ್ ಸ್ಕೋರ್.
ಆ ಪಂದ್ಯದಲ್ಲಿ ಮೋಂಗಿಯಾ ಅತ್ಯಧಿಕ ರನ್ ಬಾರಿಸಿದ್ದರೂ 28 ಬಾಲ್​ಗಳಲ್ಲಿ 31ರನ್​​ ಬಾರಿಸಿದ್ದ ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.

RELATED ARTICLES

Related Articles

TRENDING ARTICLES