Wednesday, January 15, 2025

ಯೂಟರ್ನ್​​ ಹೊಡೆದ ರಾಯುಡುಗೆ ಕ್ಯಾಪ್ಟನ್ ಪಟ್ಟ..!

ವರ್ಲ್ಡ್​​ಕಪ್​​ನಲ್ಲಿ ಚಾನ್ಸ್​ ಸಿಗ್ಲಿಲ್ಲ ಅಂತ ನೊಂದು ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ, ಆ ಬಳಿಕ ತಮ್ಮ ನಿರ್ಧಾರ ಬದಲಿಸಿ ನಿವೃತ್ತಿ ಹಿಂಪಡೆದಿರುವ ಅಂಬಟಿ ರಾಯುಡುಗೆ ಕ್ಯಾಪ್ಟನ್ ಪಟ್ಟ ಸಿಕ್ಕಿದೆ..!
ಕ್ರಿಕೆಟ್​ಗೆ ಗುಡ್​ಬೈ ಹೇಳಿ..ಬಳಿಕ ತಾನು ಕ್ರಿಕೆಟ್​ಗೆ ಮರಳುವುದಾಗಿ ತಿಳಿಸಿದ್ದ ರಾಯುಡು ಇದೀಗ ವಿಜಯ್​​ ಹಝಾರೆ ಟ್ರೋಫಿಗೆ ಹೈದರಾಬಾದ್​ ಟೀಮ್​ಗೆ ಕ್ಯಾಪ್ಟನ್ ಆಗಿ ಸೆಲೆಕ್ಟ್​ ಆಗಿದ್ದಾರೆ. ಸೆಪ್ಪೆಂಬರ್ 24ರಿಂದ ಆರಂಭವಾಗುವ ಟೂರ್ನಿಯಲ್ಲಿ 33 ವರ್ಷದ ರಾಯುಡು ಹೈದರಾಬಾದ್​ ಅನ್ನು ಮುನ್ನಡೆಸಲಿದ್ದಾರೆ.
ಹೈದರಾಬಾದ್ ತಂಡ ಇಂತಿದೆ :
ಅಂಬಾಟಿ ರಾಯುಡು (ನಾಯಕ) ಬಿ. ಸಂದೀಪ್ (ಉಪನಾಯಕ), ಪಿ ಅಕ್ಷತ್ ರೆಡ್ಡಿ, ತನ್ಮಯ್ ಅಗರ್ವಾಲ್, ಠಾಕೂರ್ ವರ್ಮಾ, ರೋಹಿತ್ ರಾಯುಡು, ಸಿ.ವಿ. ಮಿಲಿಂದ್, ಮೆಹದಿ ಹಸನ್, ಸಾಕೇತ್ ಸಾಯಿ ರಾಮ್, ಮೊಹಮ್ಮದ್ ಸಿರಾಜ್, ಮಿಕಿಲ್ ಜೈಸ್ವಾಲ್, ಜೆ ಮಲ್ಲಿಕಾರ್ಜುನ್ (ವಿಕೆ), ಕಾರ್ತಿಕೇಯ, ಟಿ ರವಿ ತೇಜ, ಆಯ ದೇವ್ ಗೌಡ್.

RELATED ARTICLES

Related Articles

TRENDING ARTICLES