Friday, December 27, 2024

ಡಿಕೆಶಿ ಮತ್ತೆ ಇಡಿ ಕಸ್ಟಡಿಗೆ

ನವದೆಹಲಿ : 8.59 ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಡಿ.ಕೆ ಶಿವಕುಮಾರ್​ ಅವರನ್ನು ಇನ್ನೂ 4 ದಿನ ಇಡಿ ಕಸ್ಟಡಿಗೆ ಒಪ್ಪಿಸಿ ಇಡಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಡಿ.ಕೆ ಶಿವಕುಮಾರ್​​​ ಹಾಗೂ ಜಾರಿ ನಿರ್ದೇಶನಾಲಯದ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನಂತರ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹರ್‌ ಸೆ.17ರವರೆಗೆ ಡಿಕೆಶಿ ಅವರನ್ನು ಕಸ್ಟಡಿಗೊಪ್ಪಿಸಿ ಆದೇಶ ನೀಡಿದ್ದಾರೆ.
ಈ ಮೊದಲುಸೆಪ್ಟೆಂಬರ್ 3ರಂದು ರೋಸ್‌ ಅವೆನ್ಯೂ ಕೋರ್ಟ್‌ ಡಿಕೆಶಿ ಅವರನ್ನು ಸೆ.13ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿತ್ತು. ಇದೀಗ ಕಸ್ಟಡಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.

RELATED ARTICLES

Related Articles

TRENDING ARTICLES