ಮಳೆಗಾಗಿ ದೇವರ ಮುಂದೆ ಗ್ರಾಮಸ್ಥರು ಧರಣಿ ಕುಳಿತ ಅಪರೂಪದ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮೊಹರಂ ಕೊನೇ ದಿನವಾದ ನಿನ್ನೆ ದೇವರ ಮುಂದೆ ಗ್ರಾಮಸ್ಥರು ಧರಣಿ ಕುಳಿತಿದ್ದರು.
ಮೊಹರಂ ಕೊನೆ ದಿನ ನಿಮಿತ್ತ ದೇವರು ವಿಸರ್ಜನೆ ಹೋಗುವ ವೇಳೆ ಗ್ರಾಮಸ್ಥರು ದೇವರನ್ನು ಅಡ್ಡಗಟ್ಟಿ, ಐದು ತುಂಬಿದ ಕೊಡವನಿಟ್ಟು ಮಳೆಗಾಗಿ ವರ ಕೇಳಿದರು. ಮಳೆ ಬರುವುದಾದರೆ ತಲೆ ಮೇಲೆ ನೀರು ಹಾಕು, ಬರುವುದಿಲ್ಲಾ ಎಂದಾದರೆ ನಮ್ಮನ್ನು ದಾಟಿಕೊಂಡು ಹಾಗೆ ಹೋಗು ಎಂದು ಜೊತೆಗೆ ಮಳೆ ಬರುತ್ತಾ ಇಲ್ಲಾ ಹೇಳಿ ಹೋಗು ಎಂದು ಗ್ರಾಮಸ್ಥರು ಪಟ್ಟು ಹಿಡಿದರು.
ಈ ವೇಳೆ ಗ್ರಾಮಸ್ಥರ ಬೇಡಿಕೆಗೆ ಗ್ರೀನ್ ಸಿಗ್ನಲ್ ಕೊಟ್ಟ ಮೊಲಾಲಿ ದೇವರು,ತುಂಬಿದ ಕೊಡವನ್ನು ಎತ್ತಿ ಸುರಿದುಕೊಂಡು ಮಳೆಯ ಮುನ್ಸೂಚನೆ ನೀಡಿ ಮೊಲಾಲಿ ದೇವರು ಹೊರಟಿತು. ಇನ್ನು ಗುಂಡೂರು ಗ್ರಾಮದಲ್ಲಿ ಇಲ್ಲಿಯವರೆಗೂ ಮಳೆಯಾಗದ ಹಿನ್ನಲೆಯಲ್ಲಿ ಭತ್ತ ನಾಟಿ ಕಾರ್ಯ ಆರಂಭವಾಗಿಲ್ಲ, ಆದ್ರೆ ಮೊಲಾಲಿ ದೇವರ ಗ್ರಿನ್ ಸಿಗ್ನಲ್ ಹಿನ್ನಲೆಯಲ್ಲಿ ಮಳೆ ಬರಬಹುದೆಂಬ ನಿರೀಕ್ಷೆಯಲ್ಲಿ ಗುಂಡೂರು ಗ್ರಾಮಸ್ಥರು ಇದ್ದಾರೆ.