Friday, December 27, 2024

20ನೇ ಹೆರಿಗೆಗೆ ರೆಡಿಯಾದ ಮಹಾತಾಯಿ..!

ಮುಂಬೈ : ಈಕೆ ಒಂದಲ್ಲ ಎರಡಲ್ಲ ಬರೋಬ್ಬರಿ 19 ಮಕ್ಕಳನ್ನು ಹೆತ್ತ ಮಹಾತಾಯಿ…ಇದೀಗ ಈಕೆ 20ನೇ ಮಗುವಿಗೆ ಜನ್ಮ ನೀಡಲು ರೆಡಿಯಾಗಿದ್ದಾಳೆ..!
ನಿಮ್ಗೆ ನೆನಪಿರಬಹುದು… 2011ರಲ್ಲಿ ಅಮೆರಿಕಾದ ವಾಷಿಂಗ್ಟನ್​ನ 45 ವರ್ಷದ ಮಹಿಳೆ ಮೈಕೇಲ್​ ಡುಗ್ಗಾರ್ ಎಂಬಾಕೆ 20 ಮಕ್ಕಳನ್ನು ಹೆತ್ತು ಸುದ್ದಿಯಾಗಿದ್ದರು..! ಬಹುಶಃ ನ್ಯೂಸ್​ ಪೇಪರ್​ಗಳಲ್ಲಿ ಅಥವಾ ವೆಬ್​ಸೈಟ್​ಗಳಲ್ಲಿ ನೀವು ಈ ಸುದ್ದಿಯನ್ನು ಓದಿರ್ತೀರಿ. ಈಗ ನಾವಿಲ್ಲಿ ಹೇಳ್ತಿರೋದು ಕೂಡ ಅಂತಹದ್ದೇ ಸುದ್ದಿ… ಆದರೆ, ಪರದೇಶದ ನ್ಯೂಸ್​ ಅಲ್ಲ.. ನಮ್ಮ ಮುಂಬೈನ ಸುದ್ದಿ.
ಹೌದು, ಮಹಾರಾಷ್ಟ್ರದ ಬೀಡ್​ ಜಿಲ್ಲೆಯ ಗೋಪಾಲ್ ಎನ್ನುವ ಅಲೆಮಾರಿ ಸಮುದಾಯದ ಲಂಕಾಬಾಯಿ ಅನ್ನೋ 38 ವರ್ಷದ ಮಹಿಳೆ 20ನೇ ಹೆರಿಗೆಗೆ ರೆಡಿಯಾಗಿದ್ದಾರೆ..! ಈಗಾಗಲೇ 19 ಮಕ್ಕಳನ್ನು ಹೊಂದಿರುವ ಈಕೆ ಇದೀಗ ಮತ್ತೆ 7 ತಿಂಗಳ ಗರ್ಭಿಣಿ. 20ನೇ ಮಗುವಿಗೆ ಜನ್ಮ ನೀಡಲು ಸಿದ್ಧವಾಗಿರುವ ಈ ಮಹಿಳೆ ಆರೋಗ್ಯವಾಗಿದ್ದಾರೆ ಅಂತ ಈ ಪ್ರಕರಣವನ್ನು ಪತ್ತೆ ಮಾಡಿರುವ ಬೀಡ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್ ಅಶೋಕ್ ಥೋರಟ್ ಸ್ಪಷ್ಟಪಡಿಸಿದ್ದಾರೆ. 

RELATED ARTICLES

Related Articles

TRENDING ARTICLES