Saturday, January 11, 2025

ಮತ್ತೆ ಪ್ರವಾಹದ ಭೀತಿಯಲ್ಲಿ ಮಲೆನಾಡಿನ ಜನತೆ

ಚಿಕ್ಕಮಗಳೂರು : ಪ್ರವಾಹದ ನಂತರ ಚೇತರಿಸಿಕೊಳ್ಳುತ್ತಿದ್ದ ಚಿಕ್ಕಮಗಳೂರು  ಜನತೆಗೆ ವರುಣ ಮತ್ತೆ ಶಾಕ್ ನೀಡಿದ್ಧಾನೆ. ಕಳೆದ ಐದು ದಿನಗಳಿಂದ  ಚಿಕ್ಕಮಗಳೂರು ಜಿಲ್ಲೆಯಾದ್ಯಂತ  ಎಡಬಿಡದೆ ಸುರಿಯುತ್ತಿರುವ ಮಳೆಯಿಂದ  ಜನ ಜೀವನ ಅಸ್ತವ್ಯಸ್ತವಾಗಿದೆ.

ಕಳೆದ ತಿಂಗಳಷ್ಟೆ ವರುಣ ಸೃಷ್ಟಿಸಿದ್ದ ಪ್ರವಾಹದಿಂದ ಮಲೆನಾಡ ಜನತೆ ಈಗ ತಾನೆ ಚೇತರಿಸಿಕೊಂಡಿದ್ದರು .ಇದೀಗ ಮತ್ತೆ ವರುಣನ ಅಬ್ಬರ ಶುರುವಾಗಿದ್ದು ಹಲವೆಡೆ  ಗುಡ್ಡ ಕುಸಿದಿದೆ. ಹಲವು ಗ್ರಾಮಗಳು ವಿದ್ಯುತ್ ಸಂಪರ್ಕ ಕಳೆದುಕೊಂಡು  ಕತ್ತಲೆಯಲ್ಲಿ ಮುಳುಗಿವೆ. ಧಾರಕಾರವಾಗಿ ಸುರಿಯುತ್ತಿರುವ ಭಾರಿ ಮಳೆಗೆಯಿಂದ ಭದ್ರಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು ಮತ್ತೆ ಪ್ರವಾಹದ ಭೀತಿ ಜನರಲ್ಲಿ ಎದುರಾಗಿದೆ.  

RELATED ARTICLES

Related Articles

TRENDING ARTICLES