ಕೊಪ್ಪಳ: ಮಗಳು ಮೃತಪಟ್ಟಿದನ್ನು ಮುಚ್ಚಿಟ್ಟು ಅಪ್ಪನನ್ನು ಕರ್ತವ್ಯಕ್ಕೆ ಕಳುಹಿಸಿದ ಅಮಾನವೀಯ ಘಟನೆ ಕೊಪ್ಪಳದ ಕೆ.ಎಸ್.ಆರ್.ಟಿ.ಸಿ ಡಿಪೋದಲ್ಲಿ ನಡೆದಿದೆ.
ಗಂಗಾವತಿಯ ಕೆ.ಎಸ್.ಆರ್.ಟಿ.ಸಿ ಡಿಪೋ ಅಧಿಕಾರಿಗಳು ಈ ಪ್ರಮಾದ ಎಸಗಿದ್ದಾರೆ. ಹೀಗಾಗಿ ಮಗಳು ಮೃತ ಪಟ್ಟಿದ್ದರೂ ಕೊನೆಗಳಿಗೆಯಲ್ಲಿ ಆಕೆಯ ಮುಖವನ್ನೂ ನೋಡಲು ಅವಕಾಶ ಮಾಡಿಕೊಟ್ಟಿಲ್ಲ.
ಮಂಜುನಾಥ್ರವರ ಕುಟುಂಬ ತಾಲೂಕಿನ ರಾಂಪೂರದಲ್ಲಿ ವಾಸವಾಗಿದೆ. ಮಗಳು ಕವಿತಾ ಅನಾರೋಗ್ಯದ ಕಾರಣ ಬುಧುವಾರ ಮುಂಜಾನೆ ೧೦ ಗಂಟೆ ಸುಮಾರಿಗೆ ಸಾವನ್ನಪಿದ್ದಾಳೆ. ಕವಿತಾ ಸಾವನ್ನಪ್ಪಿದ ವಿಷಯವನ್ನು ತಂದೆ ಮಂಜುನಾಥ್ ಗೆ ತಿಳಿಸಲು ಗಂಗಾವತಿ ಬಸ್ ಡಿಪೋ ಗೆ ಪೋನ್ ಮಾಡಿ ತಿಳಿಸಿದ್ದಾರೆ. ಆದ್ರೆ ಅಲ್ಲಿನ ಅಧಿಕಾರಿಗಳು ಮಂಜುನಾಥ್ ಗೆ ಮಗಳು ಮೃತಪಟ್ಟಿರುವ ವಿಷಯ ತಿಳಿಸದೆ ಕೆಲಸಕ್ಕೆ ಕಳುಹಿಸಿದ್ದಾರೆ. ಮಂಜುನಾಥ್ ಕೆಲಸಕ್ಕೆ ಹೋಗಿ ನಿನ್ನೆ ರಾತ್ರಿ ಡಿಪೋ ಗೆ ಬಂದಾಗ ವಿಷಯ ಗೊತ್ತಾಗಿದೆ. ಮಗಳ ಸಾವಿನ ವಿಷಯವನ್ನು ಒಂದು ದಿನ ತಡವಾಗಿ ತಿಳಿದ ಮಂಜುನಾಥ್ ದಿಗ್ಭ್ರಮೆಗೊಳಗಾಗಿದ್ದಾರೆ. ಕೂಡಲೇ ಅಧಿಕಾರಿಗಳ ಬಳಿ ಹೋಗಿ ಮಗಳು ಸಾವನ್ನಪ್ಪಿರುವ ವಿಷಯ ತಿಳಿಸಿದ್ದಾರೆ. ನನಗೆ ನಾಳೆ ರಜೆ ಕೊಡಿ ಊರಿಗೆ ಹೋಗ್ತಿನಿ ಅಂತಾ ಅಂಗಲಾಚಿ ಬೇಡಿಕೊಂಡರು ಅಧಿಕಾರಿಗಳು ಮಾತ್ರ ರಜೆ ನೀಡಲು ನಿರಾಕರಿಸಿದ್ದಾರೆ. ಕೊನೆಯ ಸಾರಿ ಮಗಳ ಮುಖವನ್ನು ನೋಡದ ಹಾಗೆ ಮಾಡಿದ ಅಧಿಕಾರಿಗಳು ಇದೀಗ ಮನೆಗೆ ಹೋಗಲು ಸಹ ರಜೆ ನೀಡುತಿಲ್ಲ ಎಂದು ಸಹೋದ್ಯೋಗಿಗಳ ಜೊತೆ ಅಳಲನ್ನು ತೋಡಿಕೊಂಡಿದ್ಧಾರೆ.