Wednesday, January 15, 2025

ಧೋನಿ ರೆಕಾರ್ಡ್​​​ ಬ್ರೇಕ್ ಮಾಡಿದ ಕ್ಯಾಪ್ಟನ್​​ ಕೊಹ್ಲಿ..!

ಕಿಂಗ್​ಸ್ಟನ್ : ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಹುತೇಕ ಪ್ರತೀ ಮ್ಯಾಚ್​ನಲ್ಲೂ ಒಂದಲ್ಲ ಒಂದು ಮೈಲುಗಲ್ಲು ಸ್ಥಾಪಿಸುತ್ತಲೇ ಇರ್ತಾರೆ. ಅಂತೆಯೇ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್​ ಗೆಲ್ಲುವ ಮೂಲಕ ನೂತನ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾರೆ. ಈ ಬಾರಿ ಕೊಹ್ಲಿ ಬ್ರೇಕ್ ಮಾಡಿರೋದು ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ರೆಕಾರ್ಡನ್ನು..!
ಧೋನಿ 60 ಟೆಸ್ಟ್​ ಮ್ಯಾಚ್​ಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು. 27 ಮ್ಯಾಚ್​ಗಳಲ್ಲಿ ಭಾರತ ಗೆದ್ದಿತ್ತು. ಇದೀಗ ಕೊಹ್ಲಿ ಧೋನಿಗಿಂತಲೂ ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಗೆದ್ದ ಕ್ಯಾಪ್ಟನ್ ಅನ್ನೋ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ಧೋನಿಗಿಂಥಾ ಕಡಿಮೆ ಮ್ಯಾಚ್​ನಲ್ಲಿ ತಂಡವನ್ನು ಮುನ್ನಡೆಸಿ ಹೆಚ್ಚು ಗೆಲುವು ಪಡೆದ ಶ್ರೇಯವೂ ಕೊಹ್ಲಿಯದ್ದಾಗಿದೆ. ಕೊಹ್ಲಿ 48 ಟೆಸ್ಟ್​​​ಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, 28 ಪಂದ್ಯಗಳಲ್ಲಿ ಭಾರತ ಗೆಲುವಿನ ನಗೆ ಬೀರಿದೆ.

RELATED ARTICLES

Related Articles

TRENDING ARTICLES