ಕಿಂಗ್ ಸ್ಟನ್ : ಅತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಮತ್ತು ಕ್ಯಾಪ್ಟನ್ ಕೊಹ್ಲಿ ಅರ್ಧಶತಕದ ನೆರವಿನಿಂದ ಭಾರತ ಮೊದಲ ದಿನಾಂತ್ಯಕ್ಕೆ 5 ವಿಕೆಟ್ಗೆ 264ರನ್ ಗಳಿಸಿದೆ.
ಸಬಿನಾ ಪಾರ್ಕ್ನಲ್ಲಿ ನಡೆಯುತ್ತಿರುವ ಮ್ಯಾಚ್ನಲ್ಲಿ ಟಾಸ್ ಗೆದ್ದ ವಿಂಡೀಸ್ ಕ್ಯಾಪ್ಟನ್ ಜೇಸನ್ ಹೋಲ್ಡರ್ ಟೀಮ್ ಇಂಡಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿದ್ರು. ಕನ್ನಡಿಗರಾದ ಕೆ.ಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಿದರು. ಆದರೆ, ಫಾರ್ಮ್ ಕೊರತೆಯನ್ನು ಎದುರಿಸುತ್ತಿರುವ ರಾಹುಲ್ ಮತ್ತೊಮ್ಮೆ ವಿಫಲರಾದರು. 13ರನ್ ಗಳನ್ನಷ್ಟೇ ಮಾಡಿ ರಾಹುಲ್ ಪೆವಿಲಿಯನ್ ಸೇರಿದ್ರು. ನಂತರ ಬಂದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಮಾಡಿದ್ದು 6 ರನ್ ಮಾತ್ರ..!
ನಂತರ 3ನೇ ವಿಕೆಟ್ಗೆ ಮಯಾಂಕ್ ಅಗರ್ವಾಲ್ ಅವರನ್ನು ಜೊತೆಯಾಗಿದ್ದು ಕ್ಯಾಪ್ಟನ್ ಕೊಹ್ಲಿ. ಜೋಡಿ ಮೂರನೇ ವಿಕೆಟ್ಗೆ 69ರನ್ ಜೊತೆಯಾಟವಾಡಿತು. ಫಸ್ಟ್ ಮ್ಯಾಚ್ನಲ್ಲಿ ಫೇಲ್ಯೂರ್ ಆಗಿದ್ದ ಅಗರ್ವಾಲ್ 55ರನ್ ಮಾಡಿದ್ರೆ, ಕೊಹ್ಲಿ 76ರನ್ ಮಾಡಿದ್ರು. ಮೊದಲ ಮ್ಯಾಚ್ನ ಸೆಂಚುರಿ ಹೀರೋ ರಹಾನೆ ಕೇವಲ 24ರನ್ ಮಾಡಿ ಪೆವಿಲಿಯನ್ ಸೇರಿಕೊಂಡ್ರು. ಸದ್ಯ ಹನುಮಾ ವಿಹಾರಿ (42), ರಿಷಬ್ ಪಂತ್ (27) ಇಂದು ಬ್ಯಾಟಿಂಗ್ ಮುಂದುವರೆಸಲಿದ್ದಾರೆ.
ವಿಂಡೀಸ್ ಪರ ಹೋಲ್ಡರ್ 3, ರೋಚ್ ಮತ್ತು ಕಾರ್ನ್ವೆಲ್ ತಲಾ 1 ವಿಕೆಟ್ ಪಡೆದಿದ್ದಾರೆ.
ಕ್ಯಾಪ್ಟನ್ ಕೊಹ್ಲಿಗೆ ಕನ್ನಡಿಗ ಮಯಾಂಕ್ ಸಾಥ್..!
TRENDING ARTICLES