Monday, November 25, 2024

ಶಿವಮೊಗ್ಗ ಬಾಲಕನ ಜೀವಕ್ಕೆ ಕುತ್ತಾಯ್ತು PUBG..!

ಪೋಷಕರೇ ಹುಷಾರ್​…ಮೊಬೈಲ್​ ಬಳಸೋ ಮಕ್ಕಳ ಮೇಲಿರಲೇಬೇಕು ನಿಮ್ಮ ಕಣ್ಣು. ನಿರ್ಲಕ್ಷ್ಯ ಮಾಡಿದ್ರೆ ಏನಾಗುತ್ತೆ ಅನ್ನೋದಕ್ಕೆ ಶಿವಮೊಗ್ಗದಲ್ಲಿ ನಡೆದ ಘಟನೆಯೇ ಸಾಕ್ಷಿ.
ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಹಕ್ಕಿಪಿಕ್ಕಿ ಕ್ಯಾಂಪ್​ ನಿವಾಸಿಯಾದ ಪ್ರೀತಂ ಭಯಾನಕ ಪಬ್​ಜಿ ಗೇಮ್​ಗೆ ಬಲಿಯಾಗಿದ್ದಾನೆ. 16 ವರ್ಷದ ಬಾಲಕ ಪ್ರೀತಂ​ ಮೊಬೈಲ್​ನಲ್ಲಿ​ ಗೇಮ್​ ಆಡುತ್ತ ಮನೆಗೆ ಮರಳುತ್ತಿದ್ದ. ಮೊದಲೇ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ಪ್ರೀತಂ ಮೊಬೈಲ್​ ನಲ್ಲಿ ಆಡುತ್ತಾ ಮನೆಗೆ ಮರಳುವಾಗ ರಸ್ತೇಲಿ ಹಂಪ್ಸ್​ಗೆ ಎಡವಿ ಬಿದ್ದದ್ದಾನೆ. ಆಗ ಆತನ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಪ್ರೀತಂ . ಈಗ ಮೊಬೈಲ್​ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES