ಬೆಂಗಳೂರು : ಪ್ರಭಾಸ್, ಶ್ರದ್ಧಾ ಕಪೂರ್ ಅಭಿನಯದ ಬಹು ನಿರೀಕ್ಷಿತ ‘ಸಾಹೋ’ ಸಿನಿಮಾ ವಿರೋಧದ ನಡುವೆಯೂ ರಾಜ್ಯದಲ್ಲಿ ರಿಲೀಸ್ ಆಗಿದೆ. ಸಾಹೋ ತೆರೆಕಂಡ ಹಿನ್ನೆಲೆಯಲ್ಲಿ ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಎದುರಾಗಿದೆ.
ಸಾಹೋ ಸಿನಿಮಾ ಅತೀ ಹೆಚ್ಚು ಥಿಯೇಟರ್ಗಳಲ್ಲಿ ರಿಲೀಸ್ ಆಗುವುದನ್ನು ಖಂಡಿಸಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ತೀವ್ರ ವಿರೋಧದ ನಡುವೆಯೂ ಇಂದು ರಾಜ್ಯಾದ್ಯಂತ ಸುಮಾರು 500 ಚಿತ್ರಮಂದಿರಗಳಿಗೆ ‘ಸಾಹೋ’ ಲಗ್ಗೆ ಇಟ್ಟಿದೆ. ಬೆಂಗಳೂರಿನ ಊರ್ವಶಿ, ಭೂಮಿಕ ಚಿತ್ರಮಂದಿರಗಳಲ್ಲಿ ಮುಂಜಾನೆಯೇ ಸಾಹೋ ಬಿಡುಗಡೆಯಾಗಿದೆ. ಇದರಿಂದಾಗಿ ಈಗಾಗಲೇ ರಿಲೀಸ್ ಆಗಿರುವ ‘ರಾಂಧವ’, ‘ನನ್ನ ಪ್ರಕಾರ’ ಸಿನಿಮಾಗಳು ಸೇರಿದಂತೆ ಕನ್ನಡ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಎದುರಾಗಿದೆ.
ರಿಲೀಸ್ ಆಗಿರುವ ಕನ್ನಡ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ‘ಸಾಹೋ’ಕ್ಕಾಗಿ ಚಿತ್ರಮಂದಿರಗಳಿಂದ ಅವುಗಳನ್ನು ಎತ್ತಂಗಡಿ ಮಾಡಲಾಗಿದೆ.
ಇನ್ನು ಸಾಹೋ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಸುಮಾರು 10,000 ಸ್ಕ್ರೀನ್ಗಳಲ್ಲಿ ತೆರೆ ಕಂಡಿದೆ. ಸುಜಿತ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಬರೋಬ್ಬರಿ 300 ಕೋಟಿ ಬಜೆಟ್ನಲ್ಲಿ ಚಿತ್ರ ನಿರ್ಮಾಣವಾಗಿದೆ.
ವಿರೋಧದ ನಡುವೆಯೂ ‘ಸಾಹೋ’ ರಿಲೀಸ್ – ಕನ್ನಡ ಚಿತ್ರಗಳಿಗೆ ಎದುರಾಯ್ತು ಥಿಯೇಟರ್ ಸಮಸ್ಸೆ..!
TRENDING ARTICLES