ಟೀಮ್ ಇಂಡಿಯಾದ ಮಾಜಿ ನಾಯಕ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥರಾಗಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಕೋಚ್ ಹುದ್ದೆಯಿಂದ ಬದಲಿಸಿ ಅವರ ಸ್ಥಾನಕ್ಕೆ ನೂತನ ಕೋಚ್ಗಳನ್ನು ಬಿಸಿಸಿಐ ನೇಮಿಸಿದೆ.
ರಾಹುಲ್ ದ್ರಾವಿಡ್ ಅವರು ಇಂಡಿಯಾ ‘ಎ’ ಮತ್ತು ಅಂಡರ್ 19 ಕೋಚ್ ಆಗಿ 2015ರಿಂದ ಕಾರ್ಯ ನಿರ್ವಹಿಸುತ್ತಿದ್ದರು. ಈ ವರ್ಷದ ಆರಂಭದಲ್ಲಿ ಎನ್ಸಿಎ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಹೀಗಾಗಿ ದಿ ವಾಲ್ ಅವರಿಂದ ಕೋಚ್ ಹುದ್ದೆಯನ್ನು ಹಿಂಪಡೆಯಲಾಗಿದೆ.
ದ್ರಾವಿಡ್ ಬದಲಿಗೆ ಭಾರತ ಎ ತಂಡಕ್ಕೆ ಹಾಗೂ ಅಂಡರ್ 19ಗೆ ಪತ್ಯೇಕ ಕೋಚ್ಗಳನ್ನು ನೇಮಿಸಲಾಗಿದೆ. ‘ಎ’ ತಂಡದ ಕೋಚ್ ಆಗಿ ಸೌರಾಷ್ಟ್ರಾದ ಮಾಜಿ ಬ್ಯಾಟ್ಸ್ಮನ್ ಸೀತಾಂಶು ಕೋಟಕ್ ಅವರನ್ನು, ಅಂಡರ್ 19 ತಂಡದ ಕೋಚ್ ಆಗಿ ಮಾಜಿ ವೇಗಿ ಪರಾಸ್ ಮಾಂಬ್ರೆ ಅವರನ್ನು ಆಯ್ಕೆ ಮಾಡಲಾಗಿದೆ.
ಸೀತಾಂಶು ಕೋಟಕ್ ಅವರು 130 ಪ್ರಥಮ ದರ್ಜೆ ಮ್ಯಾಚ್ಗಳನ್ನಾಡಿದ್ದು, ಈ ಹಿಂದೆ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಟೀಮ್ ಇಂಡಿಯಾ ‘ಎ’ ಬ್ಯಾಟಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಇನ್ನು ಪರಾಸ್ ಮಾಂಬ್ರೆ ಟೀಂ ಇಂಡಿಯಾದ ಪರ 2 ಟೆಸ್ಟ್ ಮತ್ತು 3 ಒಡಿಐ ಆಡಿದ್ದರು. ಜೊತೆಗೆ ದ್ರಾವಿಡ್ ಸಹಾಯಕರಾಗಿ ಕಳೆದ ಮೂರು ವರ್ಷಗಳಿಂದ ಇಂಡಿಯಾ ‘ಎ’ ಮತ್ತು ಅಂಡರ್ 19 ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.
ಇನ್ನುಳಿದಂತೆ ಎ ತಂಡಕ್ಕೆ ರಮೇಶ್ ಕುಮಾರ್ ಬೌಲಿಂಗ್ ಕೋಚ್ ಆಗಿ, ಟಿ. ದಿಲೀಪ್ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಹೃಷಿಕೇಶ್ ಕಾನಿಟ್ಕರ್ ಅಂಡರ್ 19 ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದಾರೆ.
ಕನ್ನಡಿಗ ರಾಹುಲ್ ದ್ರಾವಿಡ್ ಬದಲು ಇಬ್ಬರು ಕೋಚ್ಗಳ ನೇಮಕ..!
TRENDING ARTICLES