ಬೆಂಗಳೂರು : ನಾನೇನ್ ಮೋಸ ಮಾಡಿಲ್ಲ, ರೇಪ್ ಮಾಡಿಲ್ಲ..ವಿಚಾರಣೆ ಎದುರಿಸ್ತೀನಿ ಅಂತ ಟ್ರಬಲ್ ಶೂಟರ್ ಎಂದು ಕರೆಸಿಕೊಳ್ಳುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ಹೋಗ್ತೀನಿ. ದೆಹಲಿಗೆ ಹೋಗಿ ವಿಚಾರಣೆಗೆ ಹಾಜರಾಗ್ತೀನಿ. ಇಡಿ ವಿಚಾರಣೆಯನ್ನ ಎದುರಿಸುತ್ತೀನಿ. ಕೋರ್ಟ್ ಆದೇಶವನ್ನ ಗೌರವಿಸುತ್ತೇನೆ. ಎಲ್ಲ ತರಹದ ತೆರಿಗೆಗಳನ್ನೂ ಕಟ್ಟಿದ್ದೇನೆ ಎಂದರು.
ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ. ಇಲ್ಲಿಯವರೆಗೂ ಎಲ್ಲ ಕಿರುಕುಳ ಸಹಿಸಿಕೊಂಡಿದ್ದೇನೆ. ನಾನೇನು ರೇಪ್ ಮಾಡಿಲ್ಲ, ಕಳ್ಳತನ ಮಾಡಿಲ್ಲ…ಮೋಸ ಮಾಡಿಲ್ಲ. ಈ ದೇಹ ಮಾತ್ರ ಉಳಿದುಕೊಂಡಿದೆ, ಬೇರೆನೂ ಇಲ್ಲ. ನಾನು ಯಾವುದಕ್ಕೂ ಟೆನ್ಶನ್ ಮಾಡ್ಕೊಳ್ಳೋದಿಲ್ಲ ಅಂತ ಹೇಳಿದ್ರು.
2 ವರ್ಷದಿಂದ ವಿಪಕ್ಷಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ. ಇಡಿ ಅಧಿಕಾರಿಗಳ ತನಿಖೆಗೆ ನಾನು ಸಹಕರಿಸುತ್ತೇನೆ. ಇಂದು ಇಡಿ ಮುಂದೆ ವಿಚಾರಣೆಗೆ ಹಾಜರಾಗುತ್ತೇನೆ. ನಮ್ಮ ಪಕ್ಷದ ಸೂಚನೆಯಂತೆ ಗುಜರಾತ್ ಶಾಸಕರಿಗೆ ರಕ್ಷಣೆ ನೀಡಿದ್ದೆ. ಆದ್ರೆ, ಈ ವಿಚಾರದಲ್ಲಿ ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದ ಅವರು ‘ಇಡಿ’ತದಿಂದ ಹೊರ ಬರುವ ವಿಶ್ವಾಸ ವ್ಯಕ್ತಪಡಿಸಿದರು.
ನಾನೇನ್ ಮೋಸ ಮಾಡಿಲ್ಲ, ರೇಪ್ ಮಾಡಿಲ್ಲ..ವಿಚಾರಣೆ ಎದುರಿಸ್ತೀನಿ : ಡಿಕೆಶಿ
TRENDING ARTICLES