Wednesday, January 15, 2025

ಯು-ಟರ್ನ್ ಹೊಡೆದು ನಿವೃತ್ತಿ ಹಿಂಪಡೆದ ರಾಯುಡು..!

ಕ್ರಿಕೆಟಿಗ ಅಂಬಟಿ ರಾಯುಡು ನಿವೃತ್ತಿ ವಿಚಾರದಲ್ಲಿ ಯು-ಟರ್ನ್ ಹೊಡೆದಿದ್ದಾರೆ. 2019ರ ವರ್ಲ್ಡ್​ಕಪ್​ನಲ್ಲಿ ಅವಕಾಶ ಸಿಗಲಿಲ್ಲ ಎಂಬ ಬೇಸರದಿಂದ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದ ರಾಯುಡು ನಿವೃತ್ತಿ ಹಿಂಪಡೆಯುವುದಾಗಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಈ ಮೂಲಕ ತಾವು ಮತ್ತೆ ಮೈದಾನಕ್ಕೆ ಇಳಿದು ಬ್ಯಾಟ್​ ಬೀಸಲು ರೆಡಿ ಅಂತ ತಿಳಿಸಿದ್ದಾರೆ. 2019-20ರಲ್ಲಿ ಆಯೋಜಿಸಿರುವ ಎಲ್ಲಾ ಫಾರ್ಮೆಟ್ ಕ್ರಿಕೆಟ್​ನಲ್ಲಿ ಹೈದರಾಬಾದ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ನಾನು ಎಮೋಷನಲ್​ ಆಗಿ ನಿವೃತ್ತಿ ಘೋಷಿಸಿದ್ದೆ. ಈಗ ನಿವೃತ್ತಿಯನ್ನು ವಾಪಸ್ ಪಡೆಯುತ್ತಿದ್ದೇನೆ. ಬಿಸಿಸಿಐನ ಎಲ್ಲಾ ಫಾರ್ಮೆಟ್ ಕ್ರಿಕೆಟ್ ಆಡಲು ನಾನು ರೆಡಿ. ನನ್ನ ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ಚೆನ್ನೈ ಸೂಪರ್ ಕಿಂಗ್ಸ್, ಮಾಜಿ ಕ್ರಿಕೆಟಿಗರಾದ ವಿವಿಎಸ್​ ಲಕ್ಷ್ಮಣ್ ಮತ್ತು ನೊಯಲ್ ಡೇವಿಡ್​​ಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನೊಳಗೆ ಇನ್ನೂ ಕ್ರಿಕೆಟ್ ಇದೆ ಅಂತ ತೋರಿಸಿಕೊಟ್ಟ ಅವರಿಗೆಲ್ಲಾ ಧನ್ಯವಾದಗಳು ಅಂತ ರಾಯುಡು ಹೇಳಿದ್ದಾರೆ.

RELATED ARTICLES

Related Articles

TRENDING ARTICLES