ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (IPL) ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಮೆಂಟ್ಗಳಲ್ಲೊಂದು. ದೇಸಿ ಕ್ರಿಕೆಟ್ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯ ತೋರಿಸಲು ಐಪಿಎಲ್ ವೇದಿಕೆಯಾಗಿದೆ. ಐಪಿಎಲ್ ಬಿಸಿಸಿಐನ ಕನಸಿನ ಕೂಸು. ಮಿಲಿಯನ್ ಡಾಲರ್ ಟೂರ್ನ್ಮೆಂಟ್ ಐಪಿಎಲ್ನಲ್ಲಿ ಕೋಟಿ ಕೋಟಿ ಹಣ ಸುರಿಯೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಆಟಗಾರರಿಗೆ ಎಷ್ಟು ಹಣ ನೀಡಲಾಗುತ್ತದೆ ಅನ್ನೋದು ಜಗಜ್ಜಾಹಿರ. ಆದರೆ, ಇದೇ ಮೊದಲ ಬಾರಿಗೆ ಅಂಪೈರ್ಸ್ಗಳಿಗೆ ಮತ್ತು ಮ್ಯಾಚ್ ರೆಫ್ರಿಗಳಿಗೆ ನೀಡಿರುವ ಸಂಭಾವನೆಯ ಪಟ್ಟಿಯನ್ನು ಬಿಸಿಸಿಐ ರಿಲೀಸ್ ಮಾಡಿದೆ.
ಈ ಬಾರಿ ಬಿಸಿಸಿಐ ಐಪಿಎಲ್ 2019ರಲ್ಲಿ ಅಂಪೈರ್ ಹಾಗೂ ಮ್ಯಾಚ್ ರೆಫ್ರಿಗೆ ನೀಡಿರುವ ಹಣದ ಬಗ್ಗೆ ಮಾಹಿತಿ ನೀಡಿದ್ದು, ಅದರ ಪ್ರಕಾರ ಮ್ಯಾಚ್ ರೆಫ್ರಿಗಳಾದ ಕನ್ನಡಿಗ ಜಾವಗಲ್ ಶ್ರೀನಾಥ್ ಹಾಗೂ ನಿತಿನ್ ಅವರಿಗೆ ಬಿಸಿಸಿಐ ತಲಾ 52,45,128 ರೂ.ಗಳನ್ನು ಮ್ಯಾಚ್ ಫೀಸ್ ಆಗಿ ನೀಡಿದ್ರೆ, 9 ಅಂಪೈರ್ಸ್ಗಳು 25 ಲಕ್ಷ ರೂ.ಕ್ಕಿಂತಲೂ ಅಧಿಕ ಸಂಭಾವನೆ ಪಡಿದಿದ್ದಾರೆ.
25 ಲಕ್ಷಕ್ಕೂ ಅಧಿಕ ಹಣ ಪಡೆದ ಅಂಪೈರ್ಸ್ಗಳ ಲಿಸ್ಟ್ ಇಲ್ಲಿದೆ
ಎಸ್ ರವಿ- 42,46,056
ಮನು ನಾಯರ್- 41,96,102
ಸಿ ಶಮ್ಸುದ್ದಿನ್- 41,00,242
ನಂದನ್- 37,04,659
ಅನಿಲ್ ದಂಡೇಕರ್- 32,96,938
ಯಶವಂತ್ ಬರ್ದೆ- 32,96,938
ನಾರಾಯಣ್ಕುಟ್ಟಿ ವಿ- 32,96,938