Saturday, January 11, 2025

ಸೌತ್ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಧೋನಿಗಿಲ್ಲ ಚಾನ್ಸ್​..!?

ನವದೆಹಲಿ: ಭಾರತ ಕ್ರಿಕೆಟ್​​ಗೆ ಹೊಸ ಭಾಷ್ಯವನ್ನು ಬರೆದವರು ಮಾಜಿ ನಾಯಕ ಎಂ.ಎಸ್​ ಧೋನಿ. ಇವರ ಕ್ಯಾಪ್ಟನ್ಸಿಯಲ್ಲೇ ಟೀಮ್​ ಇಂಡಿಯಾ ಟಿ-20, ಏಕದಿನ ವಿಶ್ವಕಪ್​​ ಗೆದ್ದಿರೋದು ಮತ್ತು ಟೆಸ್ಟ್​​ ಕ್ರಿಕೆಟ್​ನಲ್ಲಿ ನಂ.1 ಸ್ಥಾನ ಅಲಂಕರಿಸಿದ್ದು. ಕ್ರಿಕೆಟ್​ ವರ್ಲ್ಡ್​​​ನಲ್ಲಿ ಬೆಸ್ಟ್​ ಗೇಮ್ ಫಿನಿಶರ್​​ ಅಂತ ಕರೆಸಿಕೊಂಡಿರೋ ಎಂ.ಎಸ್​ ಧೋನಿ ಸದ್ಯ ಫಾರ್ಮ್​ ಕಳೆದುಕೊಂಡು  ತಂಡದಿಂದ ಹೊರಗುಳಿಯುವಂತಾಗಿದೆ!

ಹೌದು. ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಆಯ್ಕೆ ಸಮಿತಿ ಧೋನಿಯವರನ್ನು ಟೀಮ್​ನಿಂದ ಕೈಬಿಡಲು ನಿರ್ಧರಿಸಿರುವುದೇ ಇದಕ್ಕೆ ಸಾಕ್ಷಿ.! ವಿಶ್ವಕಪ್​​​ ಬಳಿಕ  ಟೀಮ್​ ಇಂಡಿಯಾ ಕೈಗೊಂಡ ವೆಸ್ಟ್​​​ ಇಂಡೀಸ್​ ಟೂರ್​ನಲ್ಲೂ ಎಂ.ಎಸ್.​​ ಧೋನಿ ಭಾಗವಹಿಸಿಲ್ಲ. ಈ ವೇಳೆ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಲು ತೆರಳಿದ ಧೋನಿ ಬದಲಿಗೆ ರಿಷಬ್​ ಪಂತ್​​ ಕೀಪಿಂಗ್​​ ಹೊಣೆ ಹೊತ್ತಿದ್ರು. ಸದ್ಯ ವೆಸ್ಟ್​​ ಇಂಡೀಸ್​ ವಿರುದ್ಧ ಒಂದು ಟೆಸ್ಟ್​​ ಪಂದ್ಯ ಬಾಕಿಯಿದೆ. ಅದಾದ ಬಳಿಕ ಟೀಮ್​​ ಇಂಡಿಯಾ ಸೆಪ್ಟೆಂಬರ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ.20 ಹಾಗೂ ಟೆಸ್ಟ್​​ ಸರಣಿ ಆಡಲಿದೆ. ಟೆಸ್ಟ್​​ ಕ್ರಿಕೆಟ್​ಗೆ ಈ ಹಿಂದೆಯೇ ನಿವೃತ್ತಿ ಘೋಷಿಸಿರುವ ಧೋನಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಆಡ್ತಾರೆ ಎಂದು ಊಹಿಸಲಾಗಿತ್ತು. ಅವರ ಅಭಿಮಾನಿಗಳು ಕೂಡ ಈ ಕ್ಷಣಕ್ಕಾಗಿ ಕಾಯ್ತಾ ಇದ್ರು. ಆದ್ರೆ, ಆಯ್ಕೆ ಸಮಿತಿ ಧೋನಿಯವರನ್ನು ತಂಡದಿಂದ ಹೊರಗಿಡುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ಟಿ-20 ವಿಶ್ವಕಪ್​​​ ದೃಷ್ಟಿಯಿಂದ ರಿಷಬ್​ ಪಂತ್​​ಗೆ ಆಯ್ಕೆ ಸಮಿತಿ ಮಣೆ ಹಾಕುವ ಚಾನ್ಸ್​​ ಇದೆ. ರಿಷಬ್​​​ ಪಂತ್​ ಕೂಡ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಎಡವುತ್ತಿದ್ರೆ, ಅವರ ಜೊತೆಗೆ ಸಂಜು ಸ್ಯಾಮ್ಸನ್​​ ಹಾಗೂ ಇಶಾನ್​​ ಕಿಶಾನ್​​​​ ಅವಕಾಶಕ್ಕಾಗಿ ಕಾಯ್ತಾ ಇದ್ದಾರೆ. ಒಂದೆಡೆ ಧೋನಿಯವರು ಕೂಡ ಅವರ ಈ ಹಿಂದಿನ ಫಾರ್ಮ್​ನಲ್ಲಿಲ್ಲ. ಇನ್ನೊಂದೆಡೆ ರಿಷಬ್​​ ಪಂತ್​, ಸಂಜು ಸ್ಯಾಮ್ಸನ್​​, ಇಶಾನ್​ ಕಿಶಾನ್​​ ಜೊತೆ ಧೋನಿ ಬ್ಯಾಟಿಂಗ್​ ಹಾಗೂ ಕೀಪಿಂಗ್​​​ನಲ್ಲಿ ಸ್ಪರ್ಧಿಸಬೇಕಾಗಿದೆ.  ಹೀಗಾಗಿ ವರ್ಲ್ಡ್​​ಕಪ್​​ಗೆ ಬಲಿಷ್ಠ ಟೀಮ್​​ ಕಟ್ಟುವ ನಿಟ್ಟಿನಲ್ಲಿ ಧೋನಿಯವರನ್ನು ಟೀಮ್​​​ಗೆ ಸೇರಿಸಿಕೊಳ್ಳುವ ಆಸಕ್ತಿಯನ್ನು ಆಯ್ಕೆ ಸಮಿತಿ ತೋರಿಸ್ತಿಲ್ಲ.

ಇತ್ತ ಧೋನಿಯವರ ನಿವೃತ್ತಿಯ ಮಾತು ಕೂಡ ಜೋರಾಗಿಯೇ ಕೇಳಿ ಬರ್ತಿದೆ. ಮಾಜಿ ಆಟಗಾರರು ಕೂಡ ಧೋನಿ ನಿವೃತ್ತಿಗೆ ಇದು ಸಕಾಲ ಎಂದು ಅಭಿಪ್ರಾಯಪಡ್ತಿದ್ದಾರೆ. ದ.ಆಫ್ರಿಕಾ ವಿರುದ್ಧದ ಸರಣಿಯ ನಂತರ ಟೀಮ್​​​ ಇಂಡಿಯಾ ನವೆಂಬರ್​ನಲ್ಲಿ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಟಿ-20 ಪಂದ್ಯವನ್ನಾಡಲಿದೆ. ಈ ಸಂದರ್ಭದಲ್ಲಿ ಧೋನಿ ಕ್ರಿಕೆಟ್​​ ಭವಿಷ್ಯ ನಿರ್ಧಾರವಾಗುವ ಸಾಧ್ಯತೆಯಿದೆ. ಟಿ-20 ವರ್ಲ್ಡ್​​ಕಪ್​ವರೆಗೆ ಆಡ್ತಾರೋ ಅಥವಾ ಬಾಂಗ್ಲಾದೇಶ ವಿರುದ್ಧದ ಸರಣಿ ಧೋನಿ ನಿವೃತ್ತಿಗೆ ವೇದಿಕೆಯಾಗುತ್ತಾ ಎಂದು ಕಾದು ನೋಡಬೇಕಾಗಿದೆ.

RELATED ARTICLES

Related Articles

TRENDING ARTICLES