Wednesday, January 15, 2025

ರೋಹಿತ್ ಶರ್ಮಾ ಬಿಟ್ಟು ವಿಹಾರಿಯನ್ನೇ ಆಡಿಸಿದ್ದೇಕೆ ..? ಇಲ್ಲಿದೆ ಮೌನ ಮುರಿದ ಕೊಹ್ಲಿ ಮಾತು..!

ನಾರ್ತ್​​​​​ ಸೌಂಡ್​ : ಹಿಟ್​ ಮ್ಯಾನ್​ ರೋಹಿತ್ ಶರ್ಮಾ ಅದ್ಭುತ ಫಾರ್ಮ್​​ನಲ್ಲಿದ್ದಾರೆ. ಇಂಗ್ಲೆಂಡ್​​ನಲ್ಲಿ ನಡೆದ ವರ್ಲ್ಡ್​ಕಪ್​ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ರೋಹಿತ್ ಶರ್ಮಾ. ಸದ್ಯ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಟಿ20, ಒಡಿಐ ಮತ್ತು ಟೆಸ್ಟ್​ ಮೂರೂ ಮಾದರಿಗೂ ಶರ್ಮಾ ಆಯ್ಕೆಯಾಗಿದ್ರು. ಆದರೆ, ಮೊದಲ ಟೆಸ್ಟ್​ನಿಂದ ಅವರನ್ನು ಕೈ ಬಿಡಲಾಗಿತ್ತು. ಅವರ ಬದಲಿಗೆ ಆಲ್​ರೌಂಡರ್ ಹನುಮ ವಿಹಾರಿಗೆ ಮಣೆ ಹಾಕಲಾಗಿತ್ತು. ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ನಡುವಿನ ಮನಸ್ತಾವೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿಬಂದಿವೆ.
ಈ ನಡುವೆ ವಿರಾಟ್​ ಕೊಹ್ಲಿ ಹನುಮ ವಿಹಾರಿಯನ್ನೇ ಆಡಿಸಿದ್ದೇಕೆ ಅನ್ನೋದನ್ನು ತಿಳಿಸಿದ್ದಾರೆ. ಮೌನ ಮುರಿದಿರುವ ಕೊಹ್ಲಿ, ”ಹನುಮ ವಿಹಾರಿ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೇ ಅಗತ್ಯ ಸಂದರ್ಭದಲ್ಲಿ ಬೌಲಿಂಗ್​ನಲ್ಲೂ ತಂಡಕ್ಕೆ ನೆರವಾಗಬಲ್ಲ ಆಟಗಾರ. ತಂಡದಲ್ಲಿ ಸಮತೋಲನವನ್ನು ತರುವ ದೃಷ್ಟಿಯಿಂದ ರೋಹಿತ್​ ಶರ್ಮಾರ ಬದಲಿಗೆ ಅವರನ್ನು ಆಯ್ಕೆ ಮಾಡಲಾಗಿದೆ” ಅಂತ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES