Wednesday, January 15, 2025

ರಾಬಿನ್​ ಉತ್ತಪ್ಪಗೆ ಕ್ಯಾಪ್ಟನ್ ಪಟ್ಟ..!

ರಾಬಿನ್ ಉತ್ತಪ್ಪ ಸ್ಟಾರ್ ಕ್ರಿಕೆಟರ್​ಗಳಲ್ಲೊಬ್ಬರು. ಬ್ಯಾಟ್ಸ್​ಮನ್​ ಮಾತ್ರವಲ್ಲದೆ ವಿಕೆಟ್ ಕೀಪರ್ ಆಗಿಯೂ ತಮ್ಮ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್​. 2006ರಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯವ ಮೂಲಕ ಒಡಿಐಗೆ ಪದಾರ್ಪಣೆ ಮಾಡಿದ್ದ ಅವರು, 2007ರಲ್ಲಿ ಸ್ಕಾಟ್​ಲ್ಯಾಂಡ್​ ವಿರುದ್ಧದ ಮ್ಯಾಚ್​ ಮೂಲಕ ಅಂತಾರಾಷ್ಟ್ರೀಯ ಟಿ20ಗೆ ಎಂಟ್ರಿಕೊಟ್ಟಿದ್ದರು. 2007 ಒಡಿಐ ವಿಶ್ವಕಪ್​ ಹಾಗೂ ಟಿ20 ವಿಶ್ವಕಪ್​ನಲ್ಲೂ ಸ್ಥಾನ ಪಡೆದಿದ್ದರು ಈ ಕೊಡಗಿನ ಕುವರ.
2015ರಲ್ಲಿ ಜಿಂಬಾಬ್ವೆ ವಿರುದ್ಧ ಆಡಿದ ಮ್ಯಾಚೇ ಉತ್ತಪ್ಪರವರ ಇದುವರೆಗಿನ ಕೊನೆಯ ಒಡಿಐ. 2012ರಲ್ಲಿ ಸೌತ್​ ಆಫ್ರಿಕಾ ವಿರುದ್ಧ ಆಡಿದ್ದೇ ಇದುವರೆಗಿನ ಅವರ ಕೊನೆಯ ಟಿ20ಐ.
ಉತ್ತಪ್ಪ ಕನ್ನಡಿಗರು. ಕರ್ನಾಟಕದ ಪರ ಉತ್ತಮ ಆಟವಾಡಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡವರು. ಕನ್ನಡಿಗರಾದ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾಗ ತಂಡ ಕೂಡಿ ಕೊಂಡಿದ್ದ ಆಟಗಾರ ರಾಬಿನ್ ಉತ್ತಪ್ಪ. ಆದರೆ, ಕಳೆದ 4 ವರ್ಷದಿಂದ ಒಡಿಐಯಿಂದ, 7 ವರ್ಷಗಳಿಂದ ಟಿ20 ತಂಡದಿಂದ ಹೊರಗಿದ್ದಾರೆ. ಕಮ್​ಬ್ಯಾಕ್ ಮಾಡುವ ಇಂಗಿತವೂ ಅವರಲ್ಲಿದೆ.
ಇನ್ನು 2002ರಿಂದ 2017ರವರೆಗೆ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದ ಉತಪ್ಪ 2017ರಲ್ಲಿ ಸೌರಾಷ್ಟ್ರ ತಂಡವನ್ನು ಕೂಡಿಕೊಂಡಿದ್ರು. ಈ ವರ್ಷದಿಂದ ಕೇರಳ ತಂಡದಲ್ಲಿದ್ದಾರೆ. ಕೇರಳ ಟೀಮ್​ ಸೇರಿಕೊಂಡಿರೋ ಉತಪ್ಪಗೆ ನಾಯಕನ ಪಟ್ಟವೂ ಒಲಿದು ಬಂದಿದೆ.
ಹೌದು, ಕೇರಳ ರಾಜ್ಯ ಕ್ರಿಕೆಟ್​​ ತಂಡವನ್ನು ಮುಂಬರುವ ವಿಜಯ ಹಜಾರೆ ಏಕದಿನ ಹಾಗೂ ಸೈಯದ್​​ ಮುಷ್ತಾಕ್​ ಅಲಿ ಟಿ.20 ಸರಣಿಯಲ್ಲಿ ಕನ್ನಡಿಗ ರಾಬಿನ್​ ಉತ್ತಪ್ಪ ಮುನ್ನಡೆಸಲಿದ್ದಾರೆ. ಈ ಹಿಂದೆ ತಂಡದ ಕ್ಯಾಪ್ಟನ್​ ಆಗಿದ್ದ ಸಚಿನ್​ ಬೇಬಿ ಅವರು ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗ್ತಿರೋದ್ರಿಂದ ರಾಬಿನ್​ ಉತ್ತಪ್ಪ ಅವರು ತಂಡದ ಸಾರಥ್ಯ ವಹಿಸಲಿದ್ದಾರೆ. ಆದರೆ 2019-20ರ ರಣಜಿಗೂ ಅವರೇ ನಾಯಕರಾಗಿರ್ತಾರಾ ಅನ್ನೋ ಬಗ್ಗೆ ಕೆಸಿಎ ತಿಳಿಸಿಲ್ಲ.

RELATED ARTICLES

Related Articles

TRENDING ARTICLES