ಇಸ್ಲಮಾಬಾದ್: ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಪಾಕಿಸ್ತಾನಕ್ಕೆ ಬುದ್ಧಿ ಬಂದಿಲ್ಲ. ತೆಪ್ಪಗೆ ತನ್ನ ಪಾಡಿಗೆ ತಾನು ಇರೋದು ಬಿಟ್ಟು ಮತ್ತೆ ಮತ್ತೆ ಜಗಳಕ್ಕೇ ಬರ್ತಲೇ ಇರುವ ರಣಹೇಡಿ ‘ಉಗ್ರಸ್ತಾನ’ ಪುನಃ ಭಾರತದ ತಂಟೆಗೆ ಬರುವ ಬಗ್ಗೆ ಮಾತಾನಾಡಿದೆ.
ಅಕ್ಟೋಬರ್ ಇಲ್ಲವೇ ನವೆಂಬರ್ನಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧ ನಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯುದ್ಧಕ್ಕಾಗಿ ಎಲ್ಲರನ್ನು ಸಜ್ಜುಗೊಳಿಸುತ್ತಿದ್ದೇನೆ ಅಂತ ಪಾಕಿಸ್ತಾನದ ರೈಲ್ವೇ ಸಚಿವ ಶೇಖ್ ರಶೀದ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಮಲ್ಪಿಂಡಿಯಲ್ಲಿ ಮಾತಾಡಿದ ಅವರು, ಕಾಶ್ಮೀರ ಸಮಸ್ಯೆ ಯುದ್ಧದ ಮೂಲಕ ಬಗೆಹರಿಯಲಿದೆ. ಕಾಶ್ಮೀರ ವಿಚಾರವಾಗಿ ಭಾರತದೊಂದಿಗೆ ಇನ್ನೂ ಮಾತುಕತೆ ಯೋಚಿಸುವವರು ಮೂರ್ಖರು. ವಿಶ್ವಸಂಸ್ಥೆಯಲ್ಲಿ ಸೆಪ್ಟೆಂಬರ್ 27ರಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಹತ್ವದ ಭಾಷಣ ಮಾಡಲಿದ್ದಾರೆ. ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸದಿದ್ದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಬಾಂಬ್ ದಾಳಿ ಆಗಬಹುದು ಎಂದು ಹೇಳಿದರು.ಅಷ್ಟೇ ಅಲ್ಲದೇ, ಮೋದಿ ಫ್ಯಾಸಿಸ್ಟ್ ಆಡಳಿತದಿಂದ ಕಾಶ್ಮೀರ ನಾಶವಾಗ್ತಿದೆ. ಚೀನಾ ನಮ್ಮೊಂದಿಗೆ ನಿಂತಿರುವುದು ನಮ್ಮ ಅದೃಷ್ಟ. ಕಾಶ್ಮೀರ ವಿಚಾರದಲ್ಲಿ ಮುಸ್ಲಿಂ ಜಗತ್ತು ಮೌನವಾಗಿರೋದೇಕೆ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಪಾಕಿಸ್ತಾನ ವಿಚಲಿತಗೊಂಡಿದೆ. ಜಗತ್ತಿನ ವಿವಿಧ ರಾಷ್ಟ್ರಗಳು ಭಾರತಕ್ಕೆ ಬೆಂಬಲವನ್ನು ಸೂಚಿಸುತ್ತಿರುವ ಹಿನ್ನೆಲೆ ಪಾಕ್ ಜಾಗತಿಕವಾಗಿ ತೀವ್ರ ಮುಖಭಂಗವನ್ನು ಅನುಭವಿಸ್ತಿದೆ.
ತನ್ನ ಪ್ರಜೆಗಳಿಗೆ ಹೊಟ್ಟೆಗೆ ಅನ್ನ ಕೊಡಲು ಭಿಕ್ಷೆ ಬೇಡ್ತಿರೋ ‘ಪಾಪಿ’ಸ್ತಾನಕ್ಕೆ ಭಾರತದೊಂದಿಗೆ ಯುದ್ಧ ಮಾಡುವ ತಾಕತ್ತಿದೆಯೇ. ಬಹಳ ಹಿಂದಿನ ಕಥೆ ಬಿಟ್ಟಾಕಿ ಇದೇ ವರ್ಷ ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ದಾಳಿ ನಡೆಸಿದ ಪರಿಣಾಮ ಭಾರತ ಕೊಟ್ಟ ಪೆಟ್ಟನ್ನು ಇನ್ನೂ ತಡೆದುಕೊಳ್ಳಲು ಆ ರಾಷ್ಟ್ರಕ್ಕೆ ಆಗ್ತಿಲ್ಲ. ಇಂಥಾ ಹೇಡಿಗಳಿಗೆ ಭಾರತದ ವಿರುದ್ಧ ಯುದ್ಧ ಮಾಡುವ ತಾಕತ್ತು ಇದೆಯಾ..? ಧೈರ್ಯ ಇದೆಯಾ?
ಯುದ್ಧಕ್ಕೆ ಬರುತ್ತಂತೆ ಪಾಕ್ – ನಿಜಕ್ಕೂ ರಣಹೇಡಿಗಳಿಗೆ ಆ ಧೈರ್ಯ ಇದ್ಯಾ?
TRENDING ARTICLES