Friday, November 22, 2024

2ನೇ ಟೆಸ್ಟ್​​​ನಲ್ಲಿ ಪಂತ್​ ಬದಲು ಕೀಪಿಂಗ್ ಹೊಣೆ ಹೊರುವವರು ಇವರೇ…!

ವರ್ಲ್ಡ್​ಕಪ್​ ಬಳಿಕ ವೆಸ್ಟ್ ಇಂಡೀಸ್​ ಪ್ರವಾಸದಲ್ಲಿರುವ ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಟಿ20, ಒಡಿಐ ಸೀರಿಸ್ ಗೆದ್ದಿದ್ದು, 2 ಮ್ಯಾಚ್​ ಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆಯಲ್ಲಿದೆ.
ಮೊದಲ ಟೆಸ್ಟ್ ನಲ್ಲಿ ಟೀಮ್ ಇಂಡಿಯಾ 318ರನ್​ಗಳಿಂದ ಗೆದ್ದು ಬೀಗಿದ್ದರೂ ಆಗಸ್ಟ್ 30ರಂದು ನಡೆಯಲಿರುವ 2ನೇ ಟೆಸ್ಟ್​ನಲ್ಲಿ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಮುಖ್ಯವಾಗಿ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಆಡುವ 11ರ ಬಳಗದಿಂದ ಕೈಬಿಡುವ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದ್ರೆ ಪಂತ್ ಅವರನ್ನು ಹೊರಗಿಟ್ಟರೆ ವಿಕೆಟ್ ಕೀಪಿಂಗ್ ಜಬಬ್ದಾರಿ ಯಾರಿಗೆ ಅನ್ನೋದು ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ವೃದ್ಧಿಮಾನ್ ಸಾಹ..!
ಹೌದು ರಿಷಭ್ ಪಂತ್ ಬದಲು ವೃದ್ಧಿಮಾನ್ ಸಾಹ ಅವರನ್ನು ಆಡಿಸುವುದು ಬಹುತೇಕ ಖಚಿತವಾಗಿದೆ. ಪಂತ್ ಟಿ20, ಒಡಿಐ ಹಾಗೂ ಮೊದಲ ಟೆಸ್ಟ್​ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ವಿಂಡೀಸ್​ ಟೂರ್​ಗೂ ಮುನ್ನ ಇಂಗ್ಲೆಂಡ್​ನಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದರೂ ಅವರ ಬ್ಯಾಟ್​ನಿಂದ ರನ್​ಮಳೆ ಹರಿದಿರಲಿಲ್ಲ. ಈಗ 2ನೇ ಟೆಸ್ಟ್​ಗೆ ಅವರನ್ನು ಕೂರಿಸುವ ಸಾಧ್ಯತೆಯೇ ಹೆಚ್ಚು.
ಟೀಮ್ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಸೈಯ್ಯದ್ ಕಿರ್ಮಾನಿ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪಂತ್ ಇನ್ನೂ ಚಿಕ್ಕವನು. ಆತನಿಗೆ ಭವಿಷ್ಯವಿದೆ. ಕಲಿಯಲು ಇನ್ನೂ ಸಾಕಷ್ಟಿದೆ. ಕೀಪಿಂಗ್ ಮಾಡುವುದು ಅಷ್ಟೊಂದು ಸುಲಭದ ವಿಚಾರವಲ್ಲ. ಎರಡು ಗ್ಲೌಸ್​ ಧರಿಸಿ ಎಲ್ಲರೂ ಕೀಪಿಂಗ್ ಮಾಡಲು ಸಾಧ್ಯವಿಲ್ಲ. ಪಂತ್​ಗೆ ಇನ್ನಷ್ಟು ಕಲಿಯಲು ಅವಕಾಶ ನೀಡಿ, 2ನೇ ಟೆಸ್ಟ್​ಗೆ ಸಾಹರನ್ನು ಆಡಿಸ್ಬೇಕು ಅಂತ ಹೇಳಿದ್ದಾರೆ.
ಇನ್ನು ಪಂತ್ ಕೈ ಬಿಟ್ಟು ಒಂದು ವೇಳೆ ರೋಹಿತ್ ಶರ್ಮಾ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಿಕೊಂಡರೆ ಕನ್ನಡಿಗ ಕೆ.ಎಲ್ ರಾಹುಲ್​ಗೆ ವಿಕೆಟ್ ಕೀಪಿಂಗ್ ಹೊಣೆ ನೀಡಿದರೂ ಅಚ್ಚರಿಯಿಲ್ಲ..!

RELATED ARTICLES

Related Articles

TRENDING ARTICLES