Wednesday, January 15, 2025

ಒಂದು ಮ್ಯಾಚ್​ ಗೆದ್ದ ಭಾರತಕ್ಕೆ 60 ಪಾಯಿಂಟ್ ,ಇಂಗ್ಲೆಂಡ್​ಗೆ 24 ಮಾತ್ರ..!

2019 ರಿಂದ 2021ರವರೆಗೆ ಐಸಿಸಿ ವರ್ಲ್ಡ್​ ಟೆಸ್ಟ್ ಚಾಂಪಿಯನ್ ಶಿಪ್ ನಡೀತಾ ಇದೆ. ಭಾರತ ತನ್ನ ಮೊದಲ ಸರಣಿಯಲ್ಲಿ ವೆಸ್ಟ್ ಇಂಡೀಸ್​ ವಿರುದ್ಧ ಸೆಣೆಸುತ್ತಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ವಿರಾಟ್ ಪಡೆ ಗೆದ್ದಿದೆ. ಈ ಗೆಲುವಿನೊಂದಿಗೆ 60 ಪಾಯಿಂಟ್ ಸಂಪಾದಿಸಿದ್ದು, ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಪಟ್ಟಿಯಲ್ಲಿ 60 ಅಂಕಗಳನ್ನು ಪಡೆದು ಅಗ್ರಸ್ಥಾನದಲ್ಲಿದೆ.
ಇನ್ನು ಚಾಂಪಿಯನ್​ ಶಿಪ್​ನಲ್ಲಿ ಭಾರತ, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್​, ಶ್ರೀಲಂಕಾ, ವೆಸ್ಟ್ ಇಂಡೀಸ್ ಪಾಲ್ಗೊಂಡಿವೆ. ಭಾರತ -ವೆಸ್ಟ್ ಇಂಡೀಸ್ ನಡುವೆ ಸರಣಿ ನಡೆಯುತ್ತಿರುವಂತೆ ಒಡಿಐ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ 5 ಟೆಸ್ಟ್ ಮ್ಯಾಚ್​ಗಳ ಆ್ಯಶಸ್​ ಟೆಸ್ಟ್​ ಸರಣಿಯಲ್ಲಿ ಸೆಣೆಸುತ್ತಿವೆ. ಒಂದು ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದು 24 ಪಾಯಿಂಟ್ ಪಡೆದಿದೆ..!
ವೆಸ್ಟ್ ಇಂಡೀಸ್ ವಿರುದ್ಧ ಒಂದು ಮ್ಯಾಚ್​ ಗೆದ್ದ ಭಾರತಕ್ಕೆ 60 ಪಾಯಿಂಟ್, ಆಸೀಸ್ ವಿರುದ್ಧ 1 ಪಂದ್ಯ ಗೆದ್ದಿರುವ ಇಂಗ್ಲೆಂಡ್​ಗೆ 24 ಪಾಯಿಂಟ್..! ಇದು ಹೇಗೆ ಅನ್ನೋ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡಬಹುದು. ಅದಕ್ಕೆ ಇಲ್ಲಿದೆ ಉತ್ತರ.
ಐಸಿಸಿ ವರ್ಲ್ಡ್​​ ಟೆಸ್ಟ್​​ ಚಾಂಪಿಯನ್​ಶಿಪ್ ಪಾಯಿಂಟ್ಸ್​ ರೂಲ್ಸ್ ಪ್ರಕಾರ ಒಂದು ಸರಣಿಗೆ 120 ಅಂಕ ನಿಗಧಿ ಪಡಿಸಿದ್ದು, ಈ ಪಾಯಿಂಟ್​ ಅನ್ನು ಪಂದ್ಯಗಳಿಗೆ ಸಮನಾಗಿ ಹಂಚಲಾಗುತ್ತದೆ. ಭಾರತ- ವೆಸ್ಟ್ ಇಂಡೀಸ್​ ಸರಣಿಯಲ್ಲಿ ಎರಡು ಮ್ಯಾಚ್​ಗಳನ್ನು ಆಡುತ್ತಿದ್ದು ಒಂದೊಂದು ಪಂದ್ಯಕ್ಕೆ ತಲಾ 60 ಪಾಯಿಂಟ್​ಗಳನ್ನು ಹಂಚಲಾಗಿದೆ. ಅದೇರೀತಿ ಇಂಗ್ಲೆಂಡ್-ಆಸೀಸ್ ಮುಖಾಮುಖಿಯಾಗಿರುವ ಆ್ಯಶಸ್ ಸರಣಿಯಲ್ಲಿ 5 ಪಂದ್ಯಗಳಿವೆ. ಹಾಗಾಗಿ ಒಂದು ಪಂದ್ಯಕ್ಕೆ 24 ಅಂಕಗಳನ್ನು ನಿಗಧಿ ಪಡಿಸಲಾಗಿದೆ. ಹೀಗಾಗಿ 1 ಪಂದ್ಯ ಗೆದ್ದ ಇಂಗ್ಲೆಂಡ್​ಗೆ 24 ಹಾಗೂ ಭಾರತಕ್ಕೆ 60 ಪಾಯಿಂಟ್ ಸಿಕ್ಕಿದೆ.

RELATED ARTICLES

Related Articles

TRENDING ARTICLES