Wednesday, January 15, 2025

ಐಸಿಸಿ ಟೆಸ್ಟ್ ರ‍್ಯಾಂಕಿಂಗ್​ನಲ್ಲಿ 7ನೇ ಸ್ಥಾನಕ್ಕೆ ಜಿಗಿದ ಬುಮ್ರಾ..!

ಐಸಿಸಿ ನೂತನ ಟೆಸ್ಟ್​​ ರ‍್ಯಾಂಕಿಂಗ್​ ಪಟ್ಟಿಯನ್ನು ಪ್ರಕಟಿಸಿದೆ. ಬ್ಯಾಟಿಂಗ್​​ನಲ್ಲಿ ಟೀಮ್​​​ ಇಂಡಿಯಾ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ತಮ್ಮ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಬೌಲಿಂಗ್​ನಲ್ಲಿ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್​​​ ಬುಮ್ರಾ ಟಾಪ್​ 10ನಲ್ಲಿ ಸ್ಥಾನ ಪಡೆದಿದ್ದಾರೆ. 15ನೇ ಸ್ಥಾನದಲ್ಲಿದ್ದ ಅವರು 8 ಸ್ಥಾನ ಬಡ್ತಿ ಪಡೆದು 774 ಅಂಕಗಳೊಂದಿಗೆ 7ನೇ ಸ್ಥಾನಕ್ಕೇರಿದ್ದಾರೆ.
ವೆಸ್ಟ್​​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​​ ಮ್ಯಾಚ್​ನ ಸೆಕೆಂಡ್​ ಇನ್ನಿಂಗ್ಸ್​​​ನಲ್ಲಿ ಬುಮ್ರಾ 8 ಓವರ್​ಗೆ ಕೇವಲ 7 ರನ್​ ನೀಡಿ 5 ವಿಕೆಟ್​​ ಪಡೆದು ಮಿಂಚಿದ್ರು. ಈ ಪ್ರದರ್ಶನದ ಫಲವಾಗಿ ಅವರು ರ‍್ಯಾಂಕಿಂಗನಲ್ಲಿ ಪಟ್ಟಿಯಲ್ಲಿ ಮೇಲೇರಿದ್ದಾರೆ.
ಇನ್ನು ಬೌಲರ್ಸ್​​ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್​ ಕಮ್ಮಿನ್ಸ್(908)​​ ಅಗ್ರಸ್ಥಾನದಲ್ಲಿದ್ದಾರೆ. ದ.ಆಫ್ರಿಕಾದ ಕಗಿಸೋ ರಬಾಡ(841), ಇಂಗ್ಲೆಂಡ್​ನ ಜೇಮ್ಸ್​ ಆ್ಯಂಡರ್ಸನ್​(814)ರವರು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿದ್ದಾರೆ. ಈ ಹಿಂದೆ 5 ನೇ ಸ್ಥಾನದಲ್ಲಿದ್ದ ಭಾರತೀಯ ಸ್ಪಿನ್ನರ್​​ ರವೀಂದ್ರ ಜಡೇಜ ಇದೀಗ 10ನೇ ಸ್ಥಾನಕ್ಕೆ ಕುಸಿದಿದ್ದಾರೆ. ಆಲ್​ರೌಂಡರ್​ಗಳ ಪಟ್ಟಿಯಲ್ಲೂ ಚೇಂಜಸ್​ ಆಗಿದ್ದು, ಆ್ಯಶಸ್​ ಟೂರ್ನಿಯಲ್ಲಿ ಮಿಂಚುತ್ತಿರುವ ಇಂಗ್ಲೆಂಡ್​​ನ ಬೆನ್​ ಸ್ಟೋಕ್ಸ್​​(411) 2ನೇ ಸ್ಥಾನಕ್ಕೆ ಜಂಪ್​ ಆಗಿದ್ದಾರೆ. ವೆಸ್ಟ್​​ ಇಂಡೀಸ್​​ ಕ್ಯಾಪ್ಟನ್​ ಜೇಸನ್​ ಹೋಲ್ಡರ್​(433) ಮೊದಲ ಸ್ಥಾನದಲ್ಲಿದ್ದಾರೆ. ಬಾಂಗ್ಲದೇಶದ ಶಕಿಬ್​ ಅಲ್​ ಹಸನ್​​​(399) ಹಾಗೂ ಭಾರತದ ರವೀಂದ್ರ ಜಡೇಜಾ(395) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್​​ ವಿಭಾಗದಲ್ಲಿ ಅಗ್ರ ಶ್ರೇಯಾಂಕವನ್ನು ಟೀಮ್​​ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ(910)ಉಳಿಸಿಕೊಂಡಿದ್ರೆ, ಆಸ್ಟ್ರೇಲಿಯಾದ ಸ್ಟೀವನ್​ ಸ್ಮಿತ್(904)​, ನ್ಯೂಜಿಲೆಂಡ್​ನ ಕೇನ್​ ವಿಲಿಯಮ್ಸನ್​(878) ಹಾಗೂ ಭಾರತದ ಚೇತೆಶ್ವರ ಪೂಜಾರ(856) ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿದ್ದಾರೆ.

RELATED ARTICLES

Related Articles

TRENDING ARTICLES