ಸದ್ಯ Xiaomi ಕಂಪನಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ನಂ.1 ಸ್ಥಾನದಲ್ಲಿದೆ. ಚೀನಾ ಮೂಲದ ಈ ಕಂಪನಿ ಅಗ್ಗದ ಬೆಲೆ ಹಾಗೂ ಉತ್ತಮವಾದ ಫೀಚರ್ಗಳ ಮೂಲಕ ಭಾರಿ ಜನಪ್ರಿಯತೆಯನ್ನು ಗಳಿಸಿದೆ. ಇದೀಗ ಈ ಸಂಸ್ಥೆ ತನ್ನ ಹೊಸ ಪ್ರಾಡಕ್ಟ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಅದಕ್ಕೆ ಮಿ ಮಿಕ್ಸ್4 ಎಂದು ಹೆಸರಿಡಲಾಗಿದೆ. ಈ ನೂತನ ಸ್ಮಾರ್ಟ್ಫೋನ್ ರಿಲೀಸ್ಗೆ ಮುನ್ನವೇ ಭಾರಿ ನಿರೀಕ್ಷೆ ಮೂಡಿಸಿದೆ. ಇದಕ್ಕೆ ಕಾರಣ ಈ ಮೊಬೈಲ್ನಲ್ಲಿರೋ ಕ್ಯಾಮರಾ ಮತ್ತು ಸ್ಟೋರೆಜ್ ಕೆಪಾಸಿಟಿ.!
ಮಿ ಮಿಕ್ಸ್4 ಫೋನ್ನಲ್ಲಿ 108MP ಕ್ಯಾಮರಾ ಇದೆಯಂತೆ!.ಜೊತೆಗೆ 16 MP ಅಲ್ಟ್ರಾವೈಡ್ ಆ್ಯಂಗಲ್ ಲೆನ್ಸ್, 12MP ಸೆನ್ಸಾರ್ ಕೂಡ ನೀಡಲಾಗಿದೆಯಂತೆ. ಸೆಲ್ಫಿಗಾಗಿಯೇ ವಿಶೇಷವಾಗಿ 32MP ಫ್ರಂಟ್ ಕ್ಯಾಮರಾವಿದೆ. ಇನ್ನು 2K ಗೆ ಹೆಚ್ಚಿಸಬಹುದಾದ AMOLED 2K HDR10+ ಕವರ್ಡ್ ಡಿಸ್ಪ್ಲೇ ಹೊಂದಿದ್ದು, ಅದು 6.4inch ಇರಲಿದೆ. 12GB RAM ಸ್ಟೋರೆಜ್ ಈ ಫೋನಿನಲ್ಲಿ ಇದೆಯಂತೆ. ವಿಶೇಷವೆಂದರೇ, ಸ್ಟೋರೆಜ್ ಕೆಪಾಸಿಟಿಯನ್ನು 1TB ವರೆಗೂ ವಿಸ್ತರಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಇನ್ನು, 4500 mAh ಬ್ಯಾಟರಿ ಬ್ಯಾಕಪ್ ಹೊಂದಿದ್ದು, ಹಾಗೆಯೇ 30W ಸ್ಪೀಡ್ನಲ್ಲಿ ಚಾರ್ಜ್ ಮಾಡಿಕೊಳ್ಳಬಹುದಾದ ವ್ಯವಸ್ಥೆಯೂ ಇದರಲ್ಲಿದೆ. ಜೊತೆಗೂ ವೈರ್ಲೆಸ್ ಮತ್ತು ರಿವರ್ಸ್ ಚಾರ್ಜಿಂಗ್ ಕೂಡ ಮಾಡಬಹುದಂತೆ.
ಈ ನೂತನ ಸ್ಮಾರ್ಟ್ಫೋನ್ ಚೀನಾದಲ್ಲಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಡುಗಡೆಗೊಳ್ಳಲಿದ್ದು, ನಂತರ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಇನ್ನು ಈ ಮಿ ಮಿಕ್ಸ್4 ಫೋನ್, ಕಪ್ಪು ಹಾಗೂ ಗೋಲ್ಡನ್ ಕಲರ್ನಲ್ಲಿರಲಿದೆಯಂತೆ. ಭಾರತದಲ್ಲಿ ಈ ಮೊಬೈಲ್ನ ಬೆಲೆ 57,990 ರೂ. ಇರಲಿದೆಯಂತೆ.