Saturday, January 11, 2025

318 ರನ್​ಗಳ ಭರ್ಜರಿ ಜಯ ಸಾಧಿಸಿದ ಕೊಹ್ಲಿ ಪಡೆ

ಆ್ಯಂಟಿಗುವಾ: ಪ್ರವಾಸಿ ಭಾರತ ತಂಡ ಆತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧ ತನ್ನ ಗೆಲುವಿನ ಅಭಿಯಾನವನ್ನು ಮುಂದುವರಿಸಿದೆ. ಟಿ.20, ಒಡಿಐ ಸರಣಿ ಗೆದ್ದಿದ್ದ ಟೀಮ್​ ಇಂಡಿಯಾ, ಇದೀಗ ಸರ್​​ ವಿವಿಯನ್​ ರಿಚರ್ಡ್ಸನ್​​ ಸ್ಟೇಡಿಯಾಂನಲ್ಲಿ ನಡೆದ ಮೊದಲ ಟೆಸ್ಟ್​​ ಪಂದ್ಯವನ್ನು ಒಂದು ದಿನ ಬಾಕಿ ಉಳಿದಿರುವಂತೇ 318 ರನ್​​ಗಳ ಬೃಹತ್​​ ಅಂತರದಿಂದ ಗೆದ್ದು 1-0 ಮುನ್ನಡೆ ಸಾಧಿಸಿದೆ.

ಪ್ರಥಮ ಇನ್ನಿಂಗ್ಸ್​​ನಲ್ಲಿ 75 ರನ್​ಗಳ ಮುನ್ನಡೆ ಪಡೆದಿದ್ದ ಟೀಮ್​ ಇಂಡಿಯಾ​​ ದ್ವಿತೀಯ ಇನ್ನಿಂಗ್ಸ್​​ನಲ್ಲಿ ಅಜಿಂಕ್ಯಾ ರಹಾನೆ(102)ರವರ ಆಕರ್ಷಕ ಶತಕ ಹಾಗೂ ಹನುಮ ವಿಹಾರಿ(93) ಮತ್ತು ನಾಯಕ ವಿರಾಟ್​ ಕೊಹ್ಲಿ(51)ಯವರ ಅರ್ಧಶತಕದ ನೆರವಿನಿಂದ 7 ವಿಕೆಟ್​ಗೆ 343 ಗಳಿಸಿ ಇನ್ನಿಂಗ್ಸ್​​ ಡಿಕ್ಲೇರ್​​ ಮಾಡಿತು. ಹೀಗಾಗಿ ಒಟ್ಟು 419 ರನ್​​ಗಳ ಗೆಲುವಿನ ಗುರಿ ಪಡೆದ ವೆಸ್ಟ್​​ ಇಂಡೀಸ್​​ ಜಸ್ಪ್ರೀತ್​ ಬೂಮ್ರಾರ ಮಾರಕ ದಾಳಿಗೆ ನಲುಗಿ ಕೇವಲ 100 ರನ್ನಿಗೆ ಆಲೌಟಾಯಿತು. ಮೊದಲ ಇನ್ನಿಂಗ್ಸ್​​​ನಲ್ಲಿ ಅಷ್ಟೇನು ಯಶ ಕಾಣದ ಬೂಮ್ರಾ ದ್ವಿತೀಯ ಇನ್ನಿಂಗ್ಸ್​​ನಲ್ಲಿ ಕೆರೆಬಿಯನ್​​ ಬ್ಯಾಟ್ಸ್​​​ಮನ್ಸ್​​ಗಳಿಗೆ ಸಿಂಹಸ್ವಪ್ನರಾದ್ರು. 8 ಓವರ್​​ಗಳನ್ನು ಎಸೆದ ಬೂಮ್ರಾ ಕೇವಲ 7 ರನ್​​ ನೀಡಿ 5 ವಿಕೆಟ್​​​ ಕಿತ್ತರು. ಇನ್ನು ಮೊದಲ ಇನ್ನಿಂಗ್ಸ್​​ನಲ್ಲಿ 5 ವಿಕೆಟ್​​ ಗಳಿಸಿದ್ದ ಇಶಾಂತ್​ ಶರ್ಮಾ ನಿನ್ನೆಯೂ 3 ವಿಕೆಟ್​​ಗಳನ್ನು ಪಡೆದರೆ, ಶಮಿ 2 ವಿಕೆಟ್​​ ಪಡೆದು ಅವರಿಗೆ ಸಾಥ್​ ನೀಡಿದ್ರು.

ಅಜಿಂಕ್ಯಾ ರಹಾನೆ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.ಈ ಗೆಲುವಿನ ಮೂಲಕ ಭಾರತ ತಂಡ ವಿಶ್ವ ಟೆಸ್ಟ್​​ ಚಾಂಪಿಯನ್​ನಲ್ಲಿ ಶುಭಾರಂಭ ಮಾಡಿತ್ತಲ್ಲದೇ, 60 ಅಂಕಗಳನ್ನು ಕೂಡ ಪಡೆಯಿತು.

RELATED ARTICLES

Related Articles

TRENDING ARTICLES