Wednesday, January 15, 2025

ಧೋನಿ ಸಮಕ್ಕೆ ನಿಂತೇ ಬಿಟ್ರು ಕೊಹ್ಲಿ..!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ…ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸಮಕ್ಕೆ ನಿಂತಿದ್ದಾರೆ…! ಸಾಮಾನ್ಯವಾಗಿ ಪ್ರತೀ ಮ್ಯಾಚ್​​ನಲ್ಲೂ ಒಂದಲ್ಲ ಒಂದು ರೆಕಾರ್ಡ್ ಮಾಡುತ್ತಲೇ ಇರೋ ಕೊಹ್ಲಿ ಈಗ ಟೆಸ್ಟ್ ಕ್ರಿಕೆಟ್​ನಲ್ಲಿ ಮಹೇಂದ್ರ ಸಿಂಗ್ ಧೋನಿ ಸಾಧನೆಯೊಂದನ್ನು ಸರಿಗಟ್ಟಿದ್ದಾರೆ.
ವೆಸ್ಟ್ ಇಂಡೀಸ್​ ವಿರುದ್ಧ ಆ್ಯಂಟಿಗುವಾದಲ್ಲಿ ನಡೆದ ಮೊದಲ ಟೆಸ್ಟ್ ಮ್ಯಾಚ್​​ನಲ್ಲಿ ಭಾರತ 318ರನ್​ಗಳ ಭರ್ಜರಿ ಜಯ ದಾಖಲಿಸಿತು. ಇದು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತಕ್ಕೆ ಸಿಕ್ಕ 27ನೇ ಟೆಸ್ಟ್ ಜಯ. ಮಾಜಿ ನಾಯಕ ಧೋನಿ ನಾಯಕತ್ವದಲ್ಲೂ ಭಾರತ ಇಷ್ಟೇ ಪಂದ್ಯಗಳನ್ನು ಗೆದ್ದಿತ್ತು. ಧೋನಿ 60 ಟೆಸ್ಟ್​ಗಳಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, 27 ಮ್ಯಾಚ್​ಗಳಲ್ಲಿ ಭಾರತ ಗೆದ್ದಿತ್ತು. ಕೊಹ್ಲಿ ನಾಯಕತ್ವದಲ್ಲಿ ಭಾರತ 41 ಪಂದ್ಯಗಳಲ್ಲಿ 27 ಪಂದ್ಯಗಳನ್ನು ಗೆದ್ದಿದೆ. ಧೋನಿಗಿಂತ ಅತೀ ಕಡಿಮೆ ಪಂದ್ಯದಲ್ಲಿ ತಂಡವನ್ನು ಮುನ್ನಡಿಸಿ ಅವರಷ್ಟೇ ಗೆಲುವು ತಂದುಕೊಟ್ಟ ಕೀರ್ತಿಗೆ ಪಾತ್ರರಾಗಿರೋ ವಿರಾಟ್ ಇನ್ನೊಂದು ಪಂದ್ಯ ಗೆದ್ದರೆ ಧೋನಿಗಿಂತಾ ಹೆಚ್ಚು ಟೆಸ್ಟ್ ಮ್ಯಾಚ್​ ಗೆದ್ದುಕೊಟ್ಟ ನಾಯಕ ಅನ್ನೋ ಶ್ರೇಯ ತನ್ನದಾಗಿಸಿಕೊಳ್ಳಲಿದ್ದಾರೆ.

RELATED ARTICLES

Related Articles

TRENDING ARTICLES