Tuesday, January 14, 2025

ಸಚಿನ್​​ – ಗಂಗೂಲಿ ದಾಖಲೆ ಮುರಿದ ಕೊಹ್ಲಿ-ರಹಾನೆ..!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ವೈಸ್ ಕ್ಯಾಪ್ಟನ್ ಅಜಿಂಕ್ಯಾ ರಹಾನೆ ಕ್ರಿಕೆಟ್​ ದೇವರು ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ಅವರ ರೆಕಾರ್ಡನ್ನು ಬ್ರೇಕ್ ಮಾಡಿದ್ದಾರೆ.
ಆ್ಯಂಟಿಗುವಾದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್​ ಮ್ಯಾಚ್​ನ ಸೆಕೆಂಡ್​ ಇನ್ನಿಂಗ್ಸ್​ನಲ್ಲಿ ಕೊಹ್ಲಿ-ರಹಾನೆ 4ನೇ ವಿಕೆಟ್​ಗೆ 104ರನ್​ಗಳ ಅಜೇಯ ಜೊತೆಯಾಟವಾಡಿದ್ದಾರೆ. ಇವ್ರ ಜೊತೆಯಾಟದ ನೆರವಿನಿಂದ ಭಾರತ 260ರನ್​ ಮುನ್ನಡೆ ಸಾಧಿಸಿದೆ. ಕೊಹ್ಲಿ-ರಹಾನೆ ಜೋಡಿಯ 9ನೇ ಅಂತಾರಾಷ್ಟ್ರೀಯ ಶತಕದ ಜೊತೆಯಾಟ ಇದಾಗಿದೆ. ಟೆಸ್ಟ್​​ ಕ್ರಿಕೆಟ್​ನಲ್ಲಿ ಈ ಜೋಡಿಯ 8ನೇ ಸೆಂಚುರಿ ಪಾರ್ಟನರ್ ಶಿಪ್. ಈ ಜೊತೆಯಾಟದೊಂದಿಗೆ ಸಚಿನ್ ಮತ್ತು ಗಂಗೂಲಿ ಜೋಡಿಯ ದಾಖಲೆ ಬ್ರೇಕ್ ಆಗಿದೆ. ಸಚಿನ್ ಮತ್ತು ಸೌರವ್ 3 ವಿಕೆಟ್​ ಗಳು ಹೋದ ಬಳಿಕ, ಅಂದ್ರೆ 4ನೇ ವಿಕೆಟ್​ನಲ್ಲಿ 7 ಬಾರಿ ಶತಕದ ಜೊತೆಯಾಟವಾಡಿದ್ದರು. ಈ ದಾಖಲೆಯನ್ನು ಕೊಹ್ಲಿ – ರಹಾನೆ ಮುರಿದಿದ್ದಾರೆ.

RELATED ARTICLES

Related Articles

TRENDING ARTICLES