ಸ್ವಿಟ್ಜರ್ಲ್ಯಾಂಡ್: ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ನಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಗೆದ್ದ ಭಾರತೀಯ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಇಂದು ಸ್ವಿಟ್ಜರ್ಲ್ಯಾಂಡ್ನ ಬಾಸೆಲ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ಅವರು ಜಪಾನ್ನ ಒಕುಹರ ವಿರುದ್ಧ ಸೆಣಸಾಡಿದ್ರು. ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಸಿಂಧು ಅಂತಿಮವಾಗಿ ಒಕುಹರ ಅವರನ್ನು 21-7, 21-7 ಗೇಮ್ಗಳಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ರು. ಸೆಮಿಫೈನಲ್ನಲ್ಲಿ ಚೀನಾದ ಚೆನ್ ಯು ಫಿ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದ ಪಿ.ವಿ ಸಿಂಧು ಸತತವಾಗಿ 3ನೇ ಬಾರಿ ಫೈನಲ್ ಪ್ರವೇಶಿಸಿದ್ದ ವಿಶ್ವದ ಏಕೈಕ ಆಟಗಾರ್ತಿ ಎನಿಸಿಕೊಂಡಿದ್ರು. ಕಳೆದೆರಡು ಬಾರಿಯೂ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದ ಅವರು ಈ ಬಾರಿ ತಮ್ಮ ಕನಸನ್ನು ನನಸಾಗಿಸಿಕೊಂಡ್ರು. ಅದರಲ್ಲೂ ವಿಶೇಷವೆಂದರೇ, ಕಳೆದ ಬಾರಿ ಇದೇ ಒಕುಹರರವರ ವಿರುದ್ಧ ಪಿ.ವಿ ಸಿಂಧುರವರು ಫೈನಲ್ನಲ್ಲಿ ಸೋತಿದ್ದರು. ಆದ್ರೆ ಈ ಬಾರಿ ಪ್ರಶಸ್ತಿ ಗೆಲ್ಲಲೇಬೇಕೆಂಬ ಹುಮ್ಮಸ್ಸಿನೊಂದಿಗೆ ಆಡಿದ್ದ ಪಿ.ವಿ ಸಿಂಧು ಕೊನೆಗೂ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ್ರು.
ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ಪಿ.ವಿ ಸಿಂಧು..!
TRENDING ARTICLES