Tuesday, January 14, 2025

ಇದೇನಿದು ವಿರಾಟ್​ ಹೀಗಾಗಿ ಬಿಟ್ರು..!

ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಕ್ರಿಕೆಟ್​ನಿಂದಾಚೆಗೂ ಸುದ್ದಿಯಲ್ಲಿರ್ತಾರೆ..! ಈಗ ವಿರಾಟ್ ಪುಸ್ತಕ ಓದಿದ್ದೇ ಸುದ್ದಿ..! ಡ್ರೆಸ್ಸಿಂಗ್ ರೂಮ್​ನಲ್ಲಿ ಕುಳಿತು ವಿರಾಟ್ ಬುಕ್ ಓದ್ತಿರೋ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅದು ಆ ಮಟ್ಟಿಗೆ ವೈರಲ್ ಆಗ್ತಿರೋದಕ್ಕೆ ಕಾರಣ ಅವರು ಓದ್ತಿದ್ದ ಪುಸ್ತಕ..!
ಹೌದು, ವಿರಾಟ್ ಸದ್ಯ ವೆಸ್ಟ್​ ಇಂಡೀಸ್​ ಟೂರ್​ನಲ್ಲಿದ್ದಾರೆ. ಕೆರೆಬಿಯನ್ನರ ವಿರುದ್ಧ ಮೊದಲ ಟೆಸ್ಟ್ ಮ್ಯಾಚ್ ನಡೀತಾ ಇದೆ. ಟಿ20, ಒಡಿಐ ಸರಣಿ ಗೆದ್ದಿರೋ ವಿರಾಟ್ & ಟೀಮ್ ಟೆಸ್ಟ್​​ನಲ್ಲೂ ಗೆಲುವಿನ ಅಭಿಯಾನ ಮುಂದುವರೆಸೋ ವಿಶ್ವಾಸದಲ್ಲಿದೆ. ವಿರಾಟ್ ಕೆರಬಿಯನ್ನರನ್ನು ಕಟ್ಟಿ ಹಾಕಲು ಮಾಸ್ಟರ್ ಪ್ಲಾನ್ ಮಾಡ್ತಿದ್ದಾರೆ. ಆಟದ ಟೆನ್ಶನ್ ನಡುವೆಯೂ ಕೊಹ್ಲಿ ಡ್ರೆಸ್ಸಿಂಗ್​ ರೂಂನಲ್ಲಿ ‘Detox Your Ego’ ಅಂದರೆ ಅಹಂ ದಹನ ಅರ್ಥಾತ್​ ಅಹಂ ಕಡಿಮೆ ಮಾಡಿಕೊಳ್ಳೋದು ಹೇಗೆ ಅನ್ನೋ ಪುಸ್ತಕ ಓದಿದ್ದಾರೆ. ಆ ಫೋಟೋ ಈಗ ಎಲ್ಲೆಡೆ ಹರಿದಾಡ್ತಿದೆ. ಜೊತೆಗೆ ಒಂದಿಷ್ಟು ಟ್ರೋಲ್​ ಪೇಜ್​ಗಳಿಗೂ ಆಹಾರವಾಗಿ ಬಿಟ್ಟಿದೆ.
ವಿರಾಟ್​ಗೆ ಯಾರೋ ಒಂದೊಳ್ಳೆ ಗಿಫ್ಟ್ ಕೊಟ್ಟಿದ್ದಾರೆ, ಅಂಥಾ ಪುಸ್ತಕ ಅವರಿಗೆ ಅಗತ್ಯವಿತ್ತು ಅಂತ ಒಂದಿಷ್ಟು ಜನ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಇನ್ನು ವಿರಾಟ್ ಹಾಗೂ ರೋಹಿತ್ ಶರ್ಮಾ ನಡುವೆ ಮನಸ್ತಾಪವಿದೆ ಎನ್ನಲಾಗುತ್ತಿದ್ದು, ವಿರಾಟ್​ಗೆ ರೋಹಿತ್ ಶರ್ಮಾ ಈ ಪುಸ್ತಕ ಪ್ರಾಯೋಜಿಸಿದ್ದಾರೆ ಅಂತಲೂ ಕಾಲೆಳೆಯುತ್ತಿದ್ದಾರೆ. ಒಟ್ನಲ್ಲಿ ಈಗ ಬ್ಯಾಟ್ಸ್​ಮನ್ ಕೊಹ್ಲಿ ‘ಪುಸ್ತಕ ಪ್ರೇಮಿ’ ಕೊಹ್ಲಿಯಾಗಿ ಸುದ್ದಿಯಲ್ಲಿದ್ದಾರೆ.

RELATED ARTICLES

Related Articles

TRENDING ARTICLES