Saturday, January 11, 2025

ಆರ್​​ಸಿಬಿಗೆ ಹೊಸ ಕೋಚ್​; ಇನ್ನಾದ್ರೂ ಕಪ್​​ ಗೆಲ್ತಾರಾ ವಿರಾಟ್​​ ಪಡೆ!?

ಬೆಂಗಳೂರು: ತಂಡದಲ್ಲಿ ಘಟಾನುಘಟಿ ಪ್ಲೇಯರ್ಸ್​​​​ ಇದ್ರೂ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಐಪಿಎಲ್​​ನಲ್ಲಿ ಒಂದು ಬಾರಿಯೂ ಚಾಂಪಿಯನ್​​ ಪಟ್ಟಕ್ಕೇರಿಲ್ಲ. ಬ್ಯಾಟ್ಸ್​​ಮನ್​​ಗಳ ಹಾಗೂ ಬೌಲರ್ಸ್​​​​​ಗಳ ಅಸಂಘಟಿತ ಪ್ರದರ್ಶನ ತಂಡ ಹೀನಾಯ ಸೋಲುವಂತೆ ಮಾಡಿತ್ತು. ಕಳೆದ ಸೀಸನ್​​​​ನಲ್ಲೂ ಅಂಕಪಟ್ಟಿಯಲ್ಲಿ  ಆರ್​​ಸಿಬಿ 8ನೇ ಸ್ಥಾನಕ್ಕೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ತಂಡ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಅದರಂತೆ ತಂಡದ ಮುಖ್ಯ ಕೋಚ್​​ ಗ್ಯಾರಿ ಕಸ್ಟರ್ನ್​​ ಹಾಗೂ ಬೌಲಿಂಗ್​​ ಕೋಚ್​​ ಆಶೀಶ್​​ ನೆಹ್ರಾರವರಿಗೆ ತಂಡದಿಂದ ಗೇಟ್​​ಪಾಸ್​​ ನೀಡಲಾಗಿದ್ದು, ತಂಡಕ್ಕೆ ಹೊಸ ಕೋಚ್​​​ ನೇಮಿಸಲಾಗಿದೆ.

ನ್ಯೂಜಿಲೆಂಡ್​​ನ ಮಾಜಿ ಆಟಗಾರ, ಈ ಹಿಂದೆ ಕಿಂಗ್ಸ್​​ ಇಲೆವೆನ್​​​ ಪಂಜಾಬ್​​ನ ಕೋಚ್​​ ಆಗಿದ್ದ ಮೈಕ್​ ಹಸನ್​​ ಅವರನ್ನು ಡೈರೆಕ್ಟರ್​​​​ ಆಗಿ ಮತ್ತು ಹೆಡ್​ ಕೋಚ್​​ ಆಗಿ ಆಸ್ಟ್ರೇಲಿಯಾದ ಮಾಜಿ ಪ್ಲೇಯರ್​​ ಸೈಮನ್​​ ಕಾಟಿಚ್​​ ಅವರನ್ನು ನೇಮಿಸಲಾಗಿದೆ. ನೆಕ್ಸ್ಟ್​​​​ ಸೀಸನ್​​​ಗೆ ಈಗ್ಲೇ ರೆಡಿಯಾಗ್ತಿರೋ ಆರ್​​ಸಿಬಿ ಈ ಸಲಾದ್ರೂ ಕಪ್​​​ ಗೆಲ್ತಾರಾ ಎಂದು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES