Saturday, January 11, 2025

ಜಸ್ಪ್ರೀತ್​​​ ಬೂಮ್ರಾ ಸೃಷ್ಟಿಸಿದ ಆ ಹೊಸ ದಾಖಲೆ ಯಾವೂದು ಗೊತ್ತಾ?

ಆ್ಯಂಟಿಗುವಾ: ಸರ್​​ ವಿವಿಯನ್​​ ರಿಚರ್ಡ್ಸನ್​​​ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ವೆಸ್ಟ್​​ ಇಂಡೀಸ್​​ ನಡುವಿನ ಪಂದ್ಯದಲ್ಲಿ ಯಾರ್ಕರ್​ ಸ್ಪೆಷಲಿಸ್ಟ್​​ ಜಸ್ಪ್ರೀತ್​​ ಬೂಮ್ರಾ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಇದು ಅವರ 13 ನೇ ಟೆಸ್ಟ್​​ ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ವೆಸ್ಟ್​​ ಇಂಡೀಸ್​ ಬ್ಯಾಟ್ಸ್​​ಮನ್​​ ಡ್ಯಾರನ್​​​ ಬ್ರಾವೋ ವಿಕೆಟ್​ ಪಡೆಯುವ ಮೂಲಕ ಬೂಮ್ರಾ ಟೆಸ್ಟ್​​ ಕ್ರಿಕೆಟ್​ನಲ್ಲಿ 50 ವಿಕೆಟ್​​​ ಪಡೆದ ಸಾಧನೆ ಮಾಡಿದ್ರು. ಇನ್ನು ಅತೀ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆಯನ್ನು ಬೂಮ್ರಾ ಮಾಡಿದ್ದು, ಈ ಮೂಲಕ ಮಾಜಿ ಬೌಲರ್​​ ವೆಂಕಟೇಶ್ ​​ಪ್ರಸಾದ್​ ಹಾಗೂ ಮಹಮದ್​​ ಶಮಿ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.

ಇನ್ನು ಈ ಸಾಲಿನಲ್ಲಿ ಸ್ಪಿನ್ನರ್​ ಆರ್​. ಅಶ್ವಿನ್​​ ಅಗ್ರಸ್ಥಾನದಲ್ಲಿದ್ದಾರೆ. ಅವರು ತಮ್ಮ 9ನೇ ಪಂದ್ಯದಲ್ಲೇ 50 ವಿಕೆಟ್​​ಗಳನ್ನು ಪಡೆದ ಸಾಧನೆ ಮಾಡಿದ್ರು. 10 ಪಂದ್ಯಗಳಲ್ಲಿ 50 ವಿಕೆಟ್​​ ಪಡೆದ ಮಾಜಿ ಸ್ಪಿನ್ನರ್​​ ಅನಿಲ್​​ ಕುಂಬ್ಳೆ ನಂತರದ ಸ್ಥಾನದಲ್ಲಿದ್ದಾರೆ. ಇದೀಗ 13 ಪಂದ್ಯಗಳಲ್ಲಿ 50 ವಿಕೆಟ್​​ ಪಡೆದಿರೋ ಜಸ್ಪ್ರೀತ್​​ ಬೂಮ್ರಾ ಮೂರನೇ ಸ್ಥಾನವನ್ನು ಅಲಂಕರಿಸಿದ್ದಾರೆ.

RELATED ARTICLES

Related Articles

TRENDING ARTICLES