Saturday, January 11, 2025

Ind-WI ಟೆಸ್ಟ್​​: ಇಶಾಂತ್​​​​ ಶರ್ಮಾ ಮಾರಕ ಬೌಲಿಂಗ್​​ ದಾಳಿಗೆ ಪರದಾಡಿದ ಕೆರಿಬಿಯನ್​​ ಬ್ಯಾಟ್ಸ್​​ಮನ್ಸ್​​

ಆ್ಯಂಟಿಗುವಾ: ಪ್ರವಾಸಿ ಭಾರತ ತಂಡ ಮತ್ತು ಆತಿಥೇಯ ವೆಸ್ಟ್​​ ಇಂಡೀಸ್​ ನಡುವಿನ ಮೊದಲ ಟೆಸ್ಟ್​​ ಪಂದ್ಯದಲ್ಲಿ ಇಶಾಂತ್​​ ಶರ್ಮಾರ ಮಾರಕ ಬೌಲಿಂಗ್​ ದಾಳಿಗೆ ವೆಸ್ಟ್​​ ಇಂಡೀಸ್​​ ಟೀಮ್​​ ತತ್ತರಿಸಿದೆ. ಎರಡನೇ ದಿನದಾಟದ ಅಂತ್ಯಕ್ಕೆ ವೆಸ್ಟ್​​ ಇಂಡೀಸ್, 8 ವಿಕೆಟ್​​ಗಳನ್ನು ಕಳೆದುಕೊಂಡು 189 ರನ್​​​ ಗಳಿಸಿದ್ದು, ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ.

ಟಾಸ್​​ ಸೋತು ಬ್ಯಾಟಿಂಗ್​​​ಗೆ ಇಳಿಸಲ್ಪಟ್ಟ ವಿರಾಟ್​​ ಪಡೆ ಮೊದಲ ದಿನ ಅಜಿಂಕ್ಯಾ ರಹಾನೆ(81), ಕನ್ನಡಿಗ ಕೆ.ಎಲ್​.ರಾಹುಲ್​(44)ರವರ ನೆರವಿನಿಂದ 6 ವಿಕೆಟ್​​ ಕಳೆದುಕೊಂಡು 206 ರನ್​ ಕಲೆ ಹಾಕಿತು. ಎರಡನೇ ದಿನ ಆಟ ಮುಂದುವರೆಸಿ, ರವೀಂದ್ರ ಜಡೇಜಾ(58)ರವರ ಅರ್ಧಶತಕದ ನೆರವಿನಿಂದ 297 ರನ್​​​​​ಗೆ ತನ್ನ ಮೊದಲ ಇನ್ನಿಂಗ್ಸ್​​ಗೆ ತೆರೆ ಎಳೆಯಿತು. ವೆಸ್ಟ್​​ ಇಂಡೀಸ್ ಪರವಾಗಿ ಕೆಮರ್​​​ ರೋಚ್​ 4 ಹಾಗೂ ಗ್ಯಾಬ್ರಿಯಲ್​ 3 ವಿಕೆಟ್​ಗಳನ್ನು ಪಡೆದು ಮಿಂಚಿದ್ರು. ಬಳಿಕ ಬ್ಯಾಟಿಂಗ್​ಗೆ ಇಳಿದ ವೆಸ್ಟ್​​ಇಂಡೀಸ್​ ಬ್ಯಾಟ್ಸ್​​ಮನ್​​ಗಳಿಗೆ ವೇಗಿ ಇಶಾಂತ್​​ ಶರ್ಮಾರವರು ಸಿಂಹಸ್ವಪ್ನವಾಗಿ ಕಾಡಿದ್ರು. 13 ಓವರ್​​ ಬೌಲಿಂಗ್​​ ಮಾಡಿದ ಇಶಾಂತ್​ ಶರ್ಮಾ 42 ರನ್​​ ನೀಡಿ 5 ವಿಕೆಟ್​​​ ಕಬಳಿಸಿದ್ರು. ಈ ಮೂಲಕ ಇಶಾಂತ್​​ ಶರ್ಮಾ ಟೆಸ್ಟ್​​ ಕ್ರಿಕೆಟ್​​ನಲ್ಲಿ 9ನೇ ಬಾರಿಗೆ 5 ವಿಕೆಟ್​​​ ಪಡೆದ ಸಾಧನೆ ಮಾಡಿದ್ರು. 88 ರನ್ನಿಗೆ 4 ವಿಕೆಟ್​​ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಹೋಲ್ಡರ್​​ ಪಡೆಗೆ ಒಂದು ಹಂತದಲ್ಲಿ ರೋಸ್ಟನ್​ ಚೇಸ್​(48), ಶಾಯ್​​ ಹೋಪ್(24)​​, ಶಿಮ್ರಾನ್​ ಹೇಟ್ಮಯರ್(35)​​ ಆಸರೆಯಾಗುವ ಯತ್ನ ನಡೆಸಿದ್ರು. ಆದ್ರೆ ಇಶಾಂತ್​ ಶರ್ಮಾ ಅವರ್ಯಾರನ್ನೂ ತಳವೂರಲು ಬಿಡಲಿಲ್ಲ. ಇನ್ನು ಭಾರತ ತಂಡ 108 ರನ್ನ್​ಗಳ ಮುನ್ನಡೆ ಹೊಂದಿದ್ದು, 3ನೇ ದಿನವಾದ ಇಂದು ಮತ್ತೆ ತನ್ನ ಎರಡನೇ ಇನ್ನಿಂಗ್ಸ್​​ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ.

 

 

 

 

RELATED ARTICLES

Related Articles

TRENDING ARTICLES