Tuesday, January 14, 2025

ರೋಚ್​​​, ಗಬ್ರಿಲ್ ಮಾರಕ ದಾಳಿ – 297ರನ್​ಗಳಿಗೆ ಭಾರತ ಆಲ್​ಔಟ್..!

ಆ್ಯಂಟಿಗುವಾ : ಕೆರಾನ್ ರೋಚ್ ಮತ್ತು ಗಬ್ರಿಲ್ ದಾಳಿಗೆ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೊಬ್ಬರು ಪೆವಿಲಿಯನ್ ಪೆರೇಡ್ ಮಾಡಿದರು. ಇದರಿಂದ ಭಾರತ ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 297ರನ್​ಗಳಿಗೆ ಆಲ್​ಔಟ್ ಆಗಿದೆ.
ಆ್ಯಂಟಿಗುವಾದ ಸರ್ ವಿವಿಯನ್​​ ರಿಚರ್ಡ್ಸ್​​ ಸ್ಟೇಡಿಯಂನಲ್ಲಿ ನಿನ್ನೆಯಿಂದ ಆರಂಭವಾಗಿರುವ ಮೊದಲ ಟೆಸ್ಟ್​​​ನಲ್ಲಿ ವಿರಾಟ್​ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ 297ರನ್​ಗಳನ್ನಷ್ಟೇ ಗಳಿಸಿದೆ. ಟಾಸ್​ ಗೆದ್ದ ವೆಸ್ಟ್ ಇಂಡೀಸ್ ಭಾರತವನ್ನು ಮೊದಲು ಬ್ಯಾಟಿಂಗ್​ ಗೆ ಆಹ್ವಾನಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆರಂಭದಲ್ಲೇ ರೋಚ್ ದಾಳಿಗೆ ನಲುಗಿತು. ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳು ಹೆಚ್ಚು ಹೊತ್ತು ನಿಲ್ಲಲಿಲ್ಲ. ಆರಂಭಿಕ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್ (44)ಅ ಜಿಂಕ್ಯಾ ರಹಾನೆ (81) ತಂಡಕ್ಕೆ ಚೇತರಿಕೆ ನೀಡಿದ್ರು. ನಂತರ ಆಲ್​ ರೌಂಡರ್ ಹನುಮ ವಿಹಾರಿ (32) ಮತ್ತು ರವೀಂದ್ರ ಜಡೇಜಾ (58) ನೆಲಕಚ್ಚಿ ಆಡಿದ್ದು ಬಿಟ್ಟರೆ ಬೇರ್ಯಾವ ಬ್ಯಾಟ್ಸ್​ಮನ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳೀಲಿಲ್ಲ. ಸದ್ಯ ಎರಡನೇ ದಿನದ ಆಟ ನಡೆಯುತ್ತಿದ್ದು, ಭಾರತದ ಮೊದಲ ಇನ್ನಿಂಗ್ಸ್ ಮುಗಿದಿದೆ.

RELATED ARTICLES

Related Articles

TRENDING ARTICLES