Tuesday, January 14, 2025

ಸೆಂಚುರಿ ಮಿಸ್​ ಆಗಿದ್ದಕ್ಕೆ ತಲೆ ಕೆಡೆಸಿಕೊಂಡಿಲ್ಲ ಅಂದಿದ್ದೇಕೆ ರಹಾನೆ?

ವೆಸ್ಟ್​​ಇಂಡೀಸ್​ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​​ ಮ್ಯಾಚ್​ನಲ್ಲಿ ಶತಕ ವಂಚಿತ ಆಗಿದ್ದಕ್ಕೆ ತಲೆ ಕೆಡಿಸಿಕೊಂಡಿಲ್ಲ ಅಂತ ಟೀಮ್ ಇಂಡಿಯಾದ ಉಪ ನಾಯಕ ಅಜಿಂಕ್ಯಾ ರಹಾನೆ ಹೇಳಿದ್ದಾರೆ.
ಅಂಟಿಗುವಾದ ಸರ್​ ವಿವಿಯನ್ ರಿಚರ್ಡ್ಸ್​​​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟೆಸ್ಟ್​ನ ಮೊದಲ ಇನ್ನಿಂಗ್ಸ್​​ನಲ್ಲಿ ವೆಸ್ಟ್​​ ಇಂಡೀಸ್​ನ ಕೇಮರ್​ ರೋಚ್​ ಮತ್ತು ಶನ್ನೋನ್​ ಗ್ಯಾಬ್ರಿಯಲ್​ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗದೆ ಟೀಮ್ ಇಂಡಿಯಾದ ಟಾಪ್​ ಆರ್ಡರ್ ಬ್ಯಾಟ್ಸ್​ಮನ್​ಗಳು ಒಬ್ಬರ ಹಿಂದೊಬ್ಬರು ಪೆವಿಲಿಯನ್ ಕಡೆ ಹೆಜ್ಜೆ ಹಾಕಿದ್ರು. ಇಂಥಾ ಕಠಿಣ ಸಂದರ್ಭದಲ್ಲಿ ಅಜಿಂಕ್ಯಾ ರಹಾನ್ ನೆಲಕಚ್ಚಿ ಆಡಿ, 81ರನ್​ಗಳಿಸಿ ಔಟಾದ್ರು. ಕೇವಲ 19ರನ್​ಗಳಿಂದ ಸೆಂಚುರಿ ಮಿಸ್ ಮಾಡ್ಕೊಂಡ್ರು.
ಬಳಿಕ ಪ್ರೆಸ್​​​ಮೀಟ್​ನಲ್ಲಿ ಮಾತನಾಡಿದ ಅವರು, ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ಉಳ್ಕೊಂಡ್ರೆ ಟೀಮ್​ನ ಬಗ್ಗೆ ಹೆಚ್ಚು ಯೋಚ್ನೆ ಮಾಡ್ತೀನಿ. ಶತಕ ವಂಚಿತನಾದೆ ಅಂತ ಬೇಸರ ವ್ಯಕ್ತಪಡಿಸಲ್ಲ. ತಂಡದ ಗೆಲುವಿಗಾಗಿ ಹೋರಾಟ ನಡೆಸೋ ಮನೋಭಾವ ನಂದು. ಆಸೀಸ್ ವಿರುದ್ದ ಕೊನೆಯ ಟೆಸ್ಟ್ ಆಡಿ 7 ತಿಂಗಳಾಗಿದೆ. ಇಷ್ಟೊಂದು ದೀರ್ಘ ಅವಧಿ ಬಳಿಕ ಟೆಸ್ಟ್ ಆಡುವಾಗ ಕ್ರೀಸ್​ನಲ್ಲಿ ಹೊಂದಿಕೊಳ್ಳೋಕೆ ಸಾಕಷ್ಟು ಟೈಮ್​ ಹಿಡಿಯುತ್ತೆ. ಸಾಧ್ಯವಾದಷ್ಟು ಹೆಚ್ಚು ಬಾಲ್​ಗಳನ್ನು ಆಡೋ ಮೂಲಕ ತಂಡಕ್ಕೆ ಆಧಾರವಾಗಬೇಕೆಂದು ಬ್ಯಾಟಿಂಗ್ ಮಾಡಿದೆ ಅಂತ ಹೇಳಿದ್ರು.

RELATED ARTICLES

Related Articles

TRENDING ARTICLES