Tuesday, January 14, 2025

ಆ ದಾಖಲೆಯೊಂದನ್ನು ಬಿಟ್ಟು ಸಚಿನ್​ ಎಲ್ಲಾ ರೆಕಾರ್ಡ್​ಗಳನ್ನು ಕೊಹ್ಲಿ ಬ್ರೇಕ್ ಮಾಡಬಲ್ಲರು : ಸೆಹ್ವಾಗ್​

ಟೀಮ್ ಇಂಡಿಯಾದ ಕ್ಯಾಪ್ಟನ್​​ ವಿರಾಟ್​ ಕೊಹ್ಲಿ ದಾಖಲೆಗಳ ಸರದಾರ. ಒಂದರ ಮೇಲೊಂದರಂತೆ ದಾಖಲೆಗಳನ್ನು ಬರೆಯುತ್ತಲೇ ಇರುತ್ತಾರೆ. ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​​ರವರ ಹೆಸರಲ್ಲಿದ್ದ ದಾಖಲೆಗಳನ್ನು ಕೂಡ ವಿರಾಟ್ ಮುರಿಯುತ್ತಿದ್ದಾರೆ. ರನ್​ ಮಷಿನ್ ಕೊಹ್ಲಿ ಸಚಿನ್​ ಅವರ ಎಲ್ಲಾ ದಾಖಲೆಗಳನ್ನು ಮುರಿಯುತ್ತಾರೆ..ಆ ಒಂದು ದಾಖಲೆಯನ್ನು ಮಾತ್ರ ಬಿಟ್ಟು ಅಂತ ಟೀಮ್ ಇಂಡಿಯಾ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.
ಈಗಿನ ತಲೆಮಾರಿನ ಒಬ್ಬ ಪ್ರಬುದ್ಧ ಬ್ಯಾಟ್ಸ್​ಮನ್​ ವಿರಾಟ್ ಕೊಹ್ಲಿ. ದೀರ್ಘಾವಧಿ ಸ್ಥಿರ ಬ್ಯಾಟಿಂಗ್ ಮಾಡಬಲ್ಲವರು. ಸಚಿನ್ ಅವರ ಹಲವಾರು ದಾಖಲೆಗಳನ್ನು ವಿರಾಟ್ ಮುರಿಯಬಲ್ಲರು. ಅತ್ಯಂತ ಕಡಿಮೆ ಅವಧಿಯಲ್ಲಿ ಅವರು ದಾಖಲಿಸಿದ ಶತಕ ಮತ್ತು ರನ್​ ಗಳಿಸುವ ಹಾದಿ ನೋಡಿದ್ರೆ ಅವರೊಬ್ಬ ಅದ್ಭುತ ಆಟಗಾರ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ವಿರಾಟ್ ಸಚಿನ್ ತೆಂಡೂಲ್ಕರ್ ಅವರ ಬಹುತೇಕ ಎಲ್ಲಾ ರೆಕಾರ್ಡ್​ಗಳನ್ನು ಬ್ರೇಕ್ ಮಾಡಬಲ್ಲರು. ಆದರೆ ಸಚಿನ್ 200 ಟೆಸ್ಟ್​​​ ಪಂದ್ಯಗಳನ್ನು ಆಡಿದ್ದು, ಈ ದಾಖಲೆಯನ್ನು ಮಾತ್ರ ವಿರಾಟ್ ಮುರಿಯುವುದು ಕಷ್ಟ. ಅವರು ಈಗಿನ್ನೂ ಅವರು 77 ಮ್ಯಾಚ್​ಗಳನ್ನು ಮಾತ್ರ ಆಡಿದ್ದು, 200 ಟೆಸ್ಟ್ ಆಡುವುದು ಕಷ್ಟ ಎಂದಿದ್ದಾರೆ ಸೆಹ್ವಾಗ್.

RELATED ARTICLES

Related Articles

TRENDING ARTICLES