ಬೆಂಗಳೂರು: ನೆರೆ ಸಂತ್ರಸ್ತರಿಗೆ ಸ್ಯಾಂಡಲ್ವುಡ್ನ ಕಲಾವಿದರುಗಳು ತಮ್ಮ ಕೈಲಾದ ಸಹಾಯವನ್ನು ಮಾಡ್ತಿದ್ದಾರೆ. ಇದೀಗ ಆ ಸಾಲಿಗೆ ನಟ, ನಿರ್ದೇಶಕ ಉಪೇಂದ್ರರವರು ಕೂಡ ಸೇರಿದ್ದು, ಅವರು ಇಂದು ಸಿಎಂ ಬಿಎಸ್ವೈಯವರನ್ನು ಭೇಟಿಯಾಗಿ ಸಿಎಂ ಪರಿಹಾರ ನಿಧಿಗೆ 5 ಲಕ್ಷ ರೂಗಳ ಚೆಕ್ ನೀಡಿದ್ರು.
ರಾಜ್ಯದ ಹಲವು ಜಿಲ್ಲೆಗಳು ಈ ಬಾರಿ ಭೀಕರ ಪ್ರವಾಹದಿಂದ ತತ್ತರಿಸಿವೆ. ಜನ ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗುವಂತೆ ಸೆಲೆಬ್ರಿಟಿಗಳು ಮನವಿ ಮಾಡಿಕೊಂಡಿದ್ದು ಮಾತ್ರವಲ್ಲದೇ, ಸ್ವತಃ ಅವರೂ ದೇಣಿಗೆಗಳನ್ನು ನೀಡ್ತಿದ್ದಾರೆ. ಅಂತೆಯೇ ಉಪೇಂದ್ರ ಕೂಡ ನೆರೆ ಸಂತ್ರಸ್ತರಿಗೆ ಕೈ ಜೋಡಿಸಿದ್ದಾರೆ.
ಸಿಎಂ ಪರಿಹಾರ ನಿಧಿಗೆ 5 ಲಕ್ಷ ರೂ ನೀಡಿದ ರಿಯಲ್ ಸ್ಟಾರ್ ಉಪೇಂದ್ರ..!
TRENDING ARTICLES