Thursday, May 15, 2025

4 ನೇ ಬಾರಿ ಕಿಚ್ಚ ಆದ ಸುದೀಪ್..!

ಅಭಿನಯ ಚಕ್ರವರ್ತಿ, ಸ್ಯಾಂಡಲ್​ವುಡ್ ಬಾದ್​ ಷಾ ಸುದೀಪ್ 4ನೇ ಬಾರಿ ಕಿಚ್ಚ ಆಗಿದ್ದಾರೆ..! ಹೌದು, ಎಲ್ರಿಗೂ ಗೊತ್ತಿರುವಂತೆ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಇಂದು ಟ್ರೈಲರ್ ರಿಲೀಸ್ ಆಗಿದ್ದು, ಈ ಸಿನಿಮಾದಲ್ಲಿ ಸುದೀಪ್ ಹೆಸ್ರು ಕಿಚ್ಚ..! ಈ ಹಿಂದೆ ಹುಚ್ಚ, ಕಿಚ್ಚ ಮತ್ತು ಕಿಚ್ಚ-ಹುಚ್ಚ ಸಿನಿಮಾಗಳಲ್ಲಿ ಸುದೀಪ್ ಕಿಚ್ಚ ಆಗಿದ್ರು. ಅಷ್ಟೇ ಅಲ್ಲದೆ ಸುದೀಪ್​ ಅವರನ್ನು ಜನ ಪ್ರೀತಿಯಿಂದ ಕಿಚ್ಚ ಅಂತಾನೇ ಕರೀತಾರೆ.
ಪೈಲ್ವಾನ್ ಸಿನಿಮಾದಲ್ಲೂ ಸುದೀಪ್ ಕಿಚ್ಚ ಪಾತ್ರದಾರಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಟ್ರೈಲರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದು, ‘ಹೆಬ್ಬುಲಿ’ ಕೃಷ್ಣ ಮತ್ತು ಸುದೀಪ್ ಕಾಂಬಿನೇಷನ್ ಮತ್ತೊಮ್ಮೆ ಕ್ಲಿಕ್ ಆಗೋದು ಕನ್ಫರ್ಮ್ ಆಗಿದೆ. ಪೈಲ್ವಾನ್ ಪಂಚಭಾಷೆಗಳಲ್ಲಿ ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿದೆ. ನೀವಿನ್ನೂ ಟ್ರೈಲರ್ ನೋಡಿಲ್ಲ ಎಂದಾದರೆ ಇಲ್ಲಿದೆ ಟ್ರೈಲರ್..

RELATED ARTICLES

Related Articles

TRENDING ARTICLES