ಶಿವಮೊಗ್ಗ : ಸಚಿವ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗಕ್ಕೆ ಬಂದಾಗ ಅವರಿಗೆ ಯಾರು ಕೂಡ ಹಾರ, ತುರಾಯಿ ಹಾಕಬೇಡಿ ಎಂದು ಶಿವಮೊಗ್ಗ ನಗರ ಬಿಜೆಪಿ ತಮ್ಮ ಕಾರ್ಯಕರ್ತರಿಗೆ, ಸಂಘ-ಸಂಸ್ಥೆ ಪದಾಧಿಕಾರಿಗಳಿಗೆ, ಸಾರ್ವಜನಿಕರಿಗೆ ಕರೆ ನೀಡಿದೆ..!
ಅಚ್ಚರಿಯಾದ್ರು ಇದು ಸತ್ಯ…ಹಾರ, ತುರಾಯಿ ಹಾಕಿ ಸಚಿವ ಈಶ್ವರಪ್ಪ ಅವರನ್ನು ಬರಮಾಡಿಕೊಳ್ಳುವ ಬದಲು ಡಿಫ್ರೆಂಟ್ ಆಗಿ ಸ್ವಾಗತಿಸಲು ಬಿಜೆಪಿ ಪ್ಲಾನ್ ಮಾಡಿದೆ..! ಈಶ್ವರಪ್ಪರಿಗೆ ಹಾರ, ತುರಾಯಿ ಬದಲಾಗಿ, ಟವೆಲ್ ನೀಡಿ ಸನ್ಮಾನಿಸಿ ಅಂತ ಸ್ಥಳೀಯ ಬಿಜೆಪಿ ಮುಖಂಡರು ಹೇಳಿದ್ದಾರೆ.
ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಸ್. ಈಶ್ವರಪ್ಪ ಈಗ ಸಚಿವರಾಗಿದ್ದಾರೆ. ಈಗಾಗಲೇ ಸಚಿವ ಸ್ಥಾನ ಸ್ವೀಕರಿಸುತ್ತಿದ್ದಂತೆ ನೆರೆ ಪೀಡಿತ ಜಿಲ್ಲೆಗಳಿಗೆ ರೌಂಡ್ಸ್ ಹೋಗಿದ್ದು, ಇನ್ನು ತಮ್ಮ ತವರು ಕ್ಷೇತ್ರಕ್ಕೆ ಬಂದಿಲ್ಲ. ಸಚಿವರಾದ ನಂತರ ಆಗಸ್ಟ್ 25 ರ ಭಾನುವಾರದಂದು ಪ್ರಪ್ರಥಮ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ, ಶಿವಮೊಗ್ಗ ನಗರ ಬಿಜೆಪಿ ಅವರ ಸ್ವಾಗತಕ್ಕೆ ಡಿಫ್ರೆಂಟಾಗಿ ಪ್ಲಾನ್ ಮಾಡಿಕೊಂಡಿದೆ.
ಕೆ.ಎಸ್. ಈಶ್ವರಪ್ಪರಿಗೆ ಯಾರು ಕೂಡ ಹಾರ, ತುರಾಯಿ, ಹೂವಿನ ಬೊಕ್ಕೆಗಳು, ಶಾಲ್ ಗಳು ಕೊಡುಗೆಗಳನ್ನು ನೀಡುವ ಮೂಲಕ ಸನ್ಮಾನಿಸದೇ ಅಥವಾ ಸ್ವಾಗತ ಕೋರದೇ, ಟವೆಲ್ ಗಳನ್ನ ನೀಡುವ ಮೂಲಕ ಬರಮಾಡಿಕೊಳ್ಳಿ ಎಂದು ಕರೆ ನೀಡಿದ್ದಾರೆ.
ಟವಲ್ ನೀಡಿದರೆ ನೆರೆ ಸಂತ್ರಸ್ತರಿಗೆ ಕೊಡಲು ಸಹಾಯವಾಗುತ್ತದೆ. ಆದ್ದರಿಂದ ಈಶ್ವರಪ್ಪ ಅವರಿಗೆ, ಟವೆಲ್ ನೀಡೋಣ. ಸಂತ್ರಸ್ತ ಕುಟುಂಬದಲ್ಲಿ, 4 ರಿಂದ 5-6 ಜನರಿರುತ್ತಾರೆ. ಅವರಿಗೆ ಈ ಟವೆಲ್ ಉಪಯೋಗಕ್ಕೆ ಬರಲಿದೆ. ಹೀಗಾಗಿ ಡಿಫ್ರೆಂಟ್ ಪ್ಲಾನ್ ಮಾಡಿಕೊಂಡಿರುವ ಶಿವಮೊಗ್ಗ ನಗರ ಬಿಜೆಪಿ ಮುಖಂಡರು, ಈಶ್ವರಪ್ಪರಿಗೆ ಟವಲ್ ನೀಡಿ ಸ್ವಾಗತ ಕೋರಲು ರೆಡಿಯಾಗಿದೆ.
ಈಶ್ವರಪ್ಪಗೆ ಹಾರ, ತುರಾಯಿ ಹಾಕ್ಬೇಡಿ ಅಂತ ಕರೆ ಕೊಟ್ಟಿದ್ದೇಕೆ ಶಿವವೊಗ್ಗ ಬಿಜೆಪಿ?
TRENDING ARTICLES