Tuesday, January 14, 2025

ಧೋನಿ ರೆಕಾರ್ಡ್​​ ಬ್ರೇಕ್ ಮಾಡಲು ಕೊಹ್ಲಿಗೆ ಬೇಕಿರೋದು ಎರಡೇ ಎರಡು ಗೆಲುವು..!

ಟೀಮ್ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಪ್ರತಿ ಮ್ಯಾಚ್​ನಲ್ಲೂ ಒಂದಲ್ಲ ಒಂದು ರೆಕಾರ್ಡ್ ಮಾಡ್ತಾನೇ ಇರ್ತಾರೆ..! ಒಂದ್ ಕಡೆಯಿಂದ ಕ್ರಿಕೆಟ್​ ಇತಿಹಾಸದಲ್ಲಿ ಹಿಂದೆಂದೂ ದಾಖಲಾಗದ ದಾಖಲೆಗಳನ್ನು ಬರೆಯುತ್ತಿರುವ ಕೊಹ್ಲಿ, ಇನ್ನೊಂದೆಡೆ ದಿಗ್ಗಜರ ರೆಕಾರ್ಡ್​ಗಳನ್ನು ಪುಡಿ ಪುಡಿ ಮಾಡಿ ತನ್ನ ಹೆಸರನ್ನು ಆ ಸ್ಥಾನದಲ್ಲಿ ಬರೆಸಿಕೊಳ್ತಿದ್ದಾರೆ. ಒಂದೇ ಮಾತಲ್ಲಿ ಹೇಳ್ಬೇಕಂದ್ರೆ ಕೊಹ್ಲಿ ದಾಖಲೆಗಳ ಸರದಾರ..!
ಇದೀಗ ಅವರು ಮತ್ತೊಂದು ದಾಖಲೆಯನ್ನು ಬ್ರೇಕ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ..! ಅದು ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಅನ್ನೋದು ವಿಶೇಷ..!
ನಾಳೆಯಿಂದ ವೆಸ್ಟ್​ಇಂಡೀಸ್​ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸೀರಿಸ್ ಶುರುವಾಗಲಿದೆ. ಈ ಎರಡೂ ಮ್ಯಾಚ್​ಗಳನ್ನು ಗೆದ್ದರೆ ವಿರಾಟ್ ನೇತೃತ್ವದಲ್ಲಿ ಭಾರತ 28 ಮ್ಯಾಚ್​ಗಳನ್ನು ಗೆದ್ದಂತಾಗುತ್ತದೆ..! ಇದರೊಂದಿಗೆ ಧೋನಿ ರೆಕಾರ್ಡ್ ಕೂಡ ಉಡೀಸ್ ಆಗುತ್ತದೆ. ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 60 ಟೆಸ್ಟ್​ಗಳನ್ನು ಆಡಿದ್ದು, ಅದರಲ್ಲಿ 27 ಮ್ಯಾಚ್​ಗಳಲ್ಲಿ ಭಾರತ ಗೆದ್ದಿತ್ತು. ಈಗ ವಿರಾಟ್ ನೇತೃತ್ವದಲ್ಲಿ ಭಾರತ ಇದುವರೆಗೆ 46 ಟೆಸ್ಟ್​ಗಳನ್ನು ಆಡಿದ್ದು, ಇದರಲ್ಲಿ 26 ಟೆಸ್ಟ್​ಗಳಲ್ಲಿ ಭಾರತ ಗೆದ್ದಿದೆ. ವಿರಾಟ್​ ಪಡೆ ವೆಸ್ಟ್ ಇಂಡೀಸ್ ವಿರುದ್ಧ ಎರಡೂ ಮ್ಯಾಚ್​ಗಳನ್ನು ಗೆದ್ದಲ್ಲಿ ವಿರಾಟ್​ ಧೋನಿಗಿಂತಾ ಹೆಚ್ಚು ಮ್ಯಾಚ್​​ಗಳನ್ನು ಹಾಗೂ ಅತೀ ಕಡಿಮೆ ಮ್ಯಾಚ್​ ಗಳಲ್ಲಿ ಅತೀ ಹೆಚ್ಚು ಮ್ಯಾಚ್​ಗಳನ್ನು ಗೆದ್ದ ಕೀರ್ತಿಗೆ ಪಾತ್ರರಾಗಲಿದ್ದಾರೆ.

RELATED ARTICLES

Related Articles

TRENDING ARTICLES