Tuesday, January 14, 2025

ನ್ಯೂ ಜೆರ್ಸಿಯಲ್ಲಿ ವಿರಾಟ್ ಪಡೆ..!

ವರ್ಲ್ಡ್​​​ಕಪ್​​ ಬಳಿಕ ಟೀಮ್ ಇಂಡಿಯಾ ವೆಸ್ಟ್​ ಇಂಡೀಸ್ ಪ್ರವಾಸದಲ್ಲಿ ಬ್ಯುಸಿ ಇದೆ..! ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಈಗಾಗಲೇ ಟಿ20, ಒಡಿಐ ಸರಣಿಯನ್ನು ಗೆದ್ದು ಬೀಗಿದ್ದು, ಟೆಸ್ಟ್​​ಗೆ ಅಣಿಯಾಗಿದೆ. ಆಗಸ್ಟ್ 22ರಿಂದ ಟೆಸ್ಟ್​ ಆರಂಭವಾಗಲಿದ್ದು, ಹೊಸ ಜೆರ್ಸಿಯಲ್ಲಿ ಮಿಂಚಲಿದ್ದಾರೆ..!
ಆ್ಯಂಟಿಗುವಾದ ಸರ್ ವಿವಿಯನ್​​ ರಿಚರ್ಡ್ಸ್​​ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್, ಆಗಸ್ಟ್​​ 30ಕ್ಕೆ 2ನೇ ಟೆಸ್ಟ್​ ನಡೆಯಲಿದ್ದು, ವಿರಾಟ್​ ಪಡೆ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಹೊಸ ಜೆರ್ಸಿಯಲ್ಲಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್​ ಲೋಡ್ ಮಾಡಿದ್ದಾರೆ. ಇನ್ನು ಟಿ20ಯಲ್ಲಿ ಬಳಸಿದ್ದ ಜೆರ್ಸಿ ನಂಬರ್ ಅನ್ನೇ ಆಗಾರರು ಬಳಸಿದ್ದಾರೆ. ಜೆರ್ಸಿ ನಂಬರ್​​ನಲ್ಲಿ ಯಾವ್ದೇ ಬದಲಾವಣೆಯಾಗಿಲ್ಲ.

RELATED ARTICLES

Related Articles

TRENDING ARTICLES