Tuesday, January 14, 2025

ಕೊಹ್ಲಿಯನ್ನೇ ಹಿಂದಿಕ್ತಾರಾ ಸ್ಮಿತ್?

 ಆ್ಯಶಸ್​​ ಟೆಸ್ಟ್​​​ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಆಸ್ಟ್ರೇಲಿಯಾದ ಬ್ಯಾಟ್ಸ್​​ಮನ್​​ ಸ್ಟೀವ್​ ಸ್ಮಿತ್​​ ಅವರು ಐಸಿಸಿ ಬಿಡುಗಡೆ ಮಾಡಿರುವ ಟೆಸ್ಟ್​​​ ರ್ಯಾಂಕಿಂಗ್​ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಅಷ್ಟೇ ಅಲ್ಲದೇ, ಸದ್ಯ ನಂ.1 ಸ್ಥಾನದಲ್ಲಿರುವ ಟೀಮ್ ಇಂಡಿಯಾ ಕ್ಯಾಪ್ಟನ್​​ ​ವಿರಾಟ್​ ಕೊಹ್ಲಿಗೂ, ಸ್ಮಿತ್​​ ಅವರಿಗೂ​ ಕೇವಲ 9 ಪಾಯಿಂಟ್​ಗಳ ಅಂತರವಿದ್ದು, ವಿರಾಟ್​​ ನಂ.1 ಸ್ಥಾನಕ್ಕೆ ಕುತ್ತು ಬಂದಿದೆ. ನ್ಯೂಜಿಲೆಂಡ್ ನಾಯಕ ಕೇನ್​ ವಿಲಯಮ್ಸನ್​ ಅವರನ್ನು ಹಿಂದಿಕ್ಕಿ ಸ್ಮಿತ್ ಸೆಕೆಂಡ್ ಪ್ಲೇಸ್​ಗೆ ಬಂದಿದ್ದಾರೆ. 

ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಸ್ಟೀವ್​ ಸ್ಮಿತ್​​ ಅವರು ಇಂಗ್ಲೆಂಡ್​ ವಿರುದ್ಧದ ಆ್ಯಶಸ್​​ ಟೆಸ್ಟ್​​ನಲ್ಲಿ ಕಮ್​​ ಬ್ಯಾಕ್​​ ಮಾಡಿದ್ರು. ಮೊದಲ ಟೆಸ್ಟ್​​ನ ಎರಡೂ ಇನ್ನಿಂಗ್ಸ್​​ಗಳಲ್ಲೂ ಶತಕ ಸಿಡಿಸಿದ ಅವ್ರು ದ್ವಿತೀಯ ಟೆಸ್ಟ್​​​ನ ಮೊದಲ ಇನ್ನಿಂಗ್ಸ್​​ನಲ್ಲಿ 92 ರನ್​​ ಬಾರಿಸಿದ್ರು. ಮೂರು ಇನ್ನಿಂಗ್ಸ್​​​ಗಳಿಂದ 126ರ ಸರಾಸರಿಯಲ್ಲಿ  ಒಟ್ಟು 378 ರನ್​​​ಗಳನ್ನು ಗಳಿಸಿದ್ದಾರೆ.

RELATED ARTICLES

Related Articles

TRENDING ARTICLES