Tuesday, January 14, 2025

11 ವರ್ಷದ ಹಿಂದಿನ ಈ ದಿನವನ್ನು ಕ್ಯಾಪ್ಟನ್​ ಕೊಹ್ಲಿ ನೆನೆದಿದ್ದೇಕೆ?

ವಿರಾಟ್ ಕೊಹ್ಲಿ… ಟೀಮ್ ಇಂಡಿಯಾದ ಸಾರಥಿ…ವಿಶ್ವ ಕ್ರಿಕೆಟ್​​ನ ರನ್​ಮಷಿನ್… ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಿರುವ ಯಂಗ್ ಕ್ರಿಕೆಟರ್​. ಇವರೀಗ 11 ವರ್ಷದ ಹಿಂದಿನ ಈ ದಿನವನ್ನು ನೆನೆದಿದ್ದಾರೆ..! ಅಷ್ಟಕ್ಕೂ ವಿರಾಟ್ ಕೊಹ್ಲಿ ಆ ದಿನವನ್ನು ಸ್ಮರಿಸಿಕೊಂಡಿದ್ದೇಕೆ ಅಂತೀರಾ..? ಮುಂದಕ್ಕೆ ಓದಿ..
ಅದು 2008ರ ಆಗಸ್ಟ್​ 18… ದೆಹಲಿಯ ಯುವ ಆಟಗಾರ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ಗೆ ಎಂಟ್ರಿಕೊಟ್ಟ ದಿನವದು. ಶ್ರೀಲಂಕಾ ವಿರುದ್ಧ ನಡೆದ ಒಡಿಐನಲ್ಲಿ ಕಣಕ್ಕಿಳಿಯುವ ಮೂಲಕ ವಿರಾಟ್​ ಟೀಮ್ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ರು. ಅಂದಿನಿಂದ ಇಂದಿನವರೆಗೆ ನಡೆದಿರುವುದೆಲ್ಲವೂ ಇತಿಹಾಸ..! ಅಂದು ತಂಡದಲ್ಲಿ ಸ್ಥಾನ ಪಡೆದಿದ್ದ ವಿರಾಟ್​ ಇಂದು ತಂಡದ ನಾಯಕ..!
ತಾವು ಟೀಮ್ ಇಂಡಿಯಾ ಪರ ಆಡಿದ ಮೊದಲ ಮ್ಯಾಚನ್ನು ನೆನೆದಿರುವ ಕೊಹ್ಲಿ, ‘ಟೀನೇಜರ್ ಆಗಿ 2008ರಲ್ಲಿ ಶುರುವಾಗಿದ್ದ ನನ್ನ ಪಯಣಕ್ಕೀಗ 11 ವರ್ಷ..! ದೇವ್ರು ನಂಗೆ ಕರುಣಿಸಿರೋ ಈ ಯಶಸ್ಸಿನ ಬಗ್ಗೆ ನಾನೆಂದೂ ಕನಸು ಕಂಡಿರ್ಲಿಲ್ಲ. ನಿಮ್ಗೂ ಕೂಡ ನಿಮ್ಮ ಕನಸುಗನ್ನು ಬೆನ್ನಟ್ಟುವ ಶಕ್ತಿ, ಸಾಮಾರ್ಥ್ಯ ಸಿಗ್ಲಿ. ಯಾವಾಗ್ಲೂ ಸರಿಯಾದ ಮಾರ್ಗವನ್ನೇ ಅನುಸರಿಸಿ” ಅಂತ ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES